

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ಪ್ರಸಿದ್ಧವಾದ ವಿದುರಾಶ್ವತ್ಥ, ಇತರ ದೇವಾಲಯಗಳು, ಕೋಟಾಲದಿನ್ನೆಯ ಸಮೀಪ ವಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರ, ವಿವಿಧ ಸರ್ಕಾರಿ ವಿದ್ಯಾಕೇಂದ್ರಗಳು, ಸಾಂಸತಿಕ ಕೇಂದ್ರವಾದ ಡಾ.ಎಚ್. ಎನ್. ಕಲಾ ಭವನ ಅಭಿವೃದ್ಧಿಗೆ ಶ್ರಮಿಸುವುದಾಗಿ ಡಾ.ಎಚ್. ನರಸಿಂಹಯ್ಯ ವಿಜ್ಞಾನ, ಶೈಣಿಕ, ಸಾಂಸತಿಕ, ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಅಧ್ಯ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿದ್ದಾರೆ.
ಪ್ರಾಧಿಕಾರದ ನೂತನ ಅಧ್ಯರಾಗಿ ನೇಮಕವಾದ ಬಳಿಕ ಪ್ರಥಮ ಬಾರಿಗೆ ಗೌರಿಬಿದನೂರು ನಗರಕ್ಕೆ ಆಗಮಿಸಿದ ಅವರು, ನಾಗಯ್ಯರೆಡ್ಡಿ ವೃತ್ತದಲ್ಲಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಇಂದು ತೋರಿದ ಆದರಾಭಿಮಾನ ಸ್ಫೂರ್ತಿ ನೀಡಿದೆ. ಕ್ಷೇತ್ರದ ಶಾಸಕ, ಸಚಿವನಾಗಿ 25 ವರ್ಷಗಳ ಸೇವೆಯನ್ನು ಗುರುತಿಸಿ ಸರ್ಕಾರ ಪ್ರಾಧಿಕಾರದ ಅಧ್ಯನನ್ನಾಗಿ ನೇಮಿಸಿದೆ ಎಂದ ಅವರು, ತಾಲೂಕು ಕೇಂದ್ರದಲ್ಲಿ ಕಾರ್ಯಾಲಯ ಆರಂಭಿಸಿ ಜನಸೇವೆಗೆ ಮುಂದಾಗುತ್ತೇನೆ ಎಂದರು.
ಚಿಕ್ಕಬಳ್ಳಾಪುರ ಶಾಸಕ ಪ್ರದಿಪ್ ಈಶ್ವರ್ ಮಾತನಾಡಿ, ರಾಜ್ಯ ಸರ್ಕಾರ ಜನಪರ ಆಡಳಿತ ನೀಡುತ್ತಿದೆ ಮುಂಬರುವ ಸ್ಥಳೀಯ ಆಡಳಿತ ಸಂಸ್ಥೆ ಚುನಾವಣೆಗಳಿಗೆ ಕಾಂಗ್ರೆಸ್ ಪ್ರಬಲವಾಗಿ ಬೆಳೆಸಬೇಕು ಎಂದರು.
ಮುಖಂಡರಾದ ವೇದಲವೇಣಿ ವೇಣು, ಭಾರ್ಗವರೆಡ್ಡಿ, ಹನುಮಂತರೆಡ್ಡಿ, ಪ್ರಕಾಶರೆಡ್ಡಿ, ಆರ್.ಪಿ.ಗೋಪಿನಾಥ್ ಇತರರು ಇದ್ದರು.
* ಬೆಂಬಲಿಗರ ಸಂಭ್ರಮ
ಶಿವಶಂಕರ ರೆಡ್ಡಿ ಅವರನ್ನು ಡಾ.ಎಚ್.ಎನ್.ಪ್ರಾಧಿಕಾರದ ಅಧ್ಯರನ್ನಾಗಿ ನೇಮಿಸಿ ಆದೇಶ ಹೊರಬೀಳುತ್ತಿದ್ದಂತೆ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಗೌರಿಬಿದನೂರಿನಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.