

ವಿಜಯವಾಣಿ ಸುದ್ದಿಜಾಲ ಗದಗ
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕನಲ್ಲಿ ರೈತರ ಸಾಲವನ್ನು ಏಕ ಗವಾಕ್ಷಿ ಮೂಲಕ (ಒನ್ ಟೈಮ್ ಸೆಟ್ಲಮೆಂಟ್) ಮಾಡಲು ಅನುಮತಿ ನೀಡುವಂತೆ ಕಿಸಾನ ಜಾಗೃತಿ ವಿಕಾಸ ಸಂ ಮಂಗಳವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
"ರೈತರ ಸಾಲ ಮರುಪಾವತಿಗೆ ಕೆಲವು ಬ್ಯಾಂಕ್ಗಳ ಏಕ ಗವಾಕ್ಷಿ ಮೂಲಕ ಪಾವತಿಸಲು ಸನುಮತಿ ನೀಡಿದೆ. ಆದರೆ, ಹಲವು ಬ್ಯಾಂಕುಗಳು ರೈತರಿಗೆ ತೊಂದರೆ ನೀಡುತ್ತೀವೆ. ಕೋವಿಡ್ ನಂತರ ಸತತವಾಗಿ ಮೂರು ವರ್ಷಗಳಿಂದ ಸರಿಯಾಗಿ ಬೆಳೆ ಬರದೇ, ಬೆಳೆ ಬಂದು ಸರಿಯಾದ ಮಾರುಕಟ್ಟೆ ಬೆಲೆ ಇಲ್ಲದೇ ರೈತರು ಸಂಕಷ್ಟದಲ್ಲಿ ಸಿಲುಕಿರುತ್ತಾರೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರೈತರ ಬೆನ್ನಿಗೆ ನಿಲ್ಲಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸಲ್ಲಿಸುವ ವೇಳೆ ವೀರನಗೌಡ ನಾಡಗೌಡರ, ಧ್ರುವಕುಮಾರ ಹೂಗಾರ, ಶಂಕರಗೌಡ ಪಾಟೀಲ, ಬಸವರಾಜ ನವಲಗುಂದ, ಭರತ ಕೊರ್ಲಹಳ್ಳಿ ಹಲವರು ಇದ್ದರು.