ವಾರ್ಡ್ ಸಮಿತಿ ರಚನೆಗೆ ಆಗ್ರಹ

IMG_20230914_205400_743-2.jpg
Published on

ಹುಬ್ಬಳ್ಳಿ: ಶಾಸನಾತ್ಮಕವಾಗಿ ಕಡ್ಡಾಯವಾದ ನಾಗರಿಕರ ವಾರ್ಡ್ ಸಮಿತಿ ರಚನೆ ಶ್ರೀ ಪ್ರಾರಂಭಿಸಬೇಕು ಎಂದು ಹುಬ್ಬಳ್ಳಿ- ಧಾರವಾಡ ನಾಗರಿಕರ ವಾರ್ಡ್ ಸಮಿತಿ ಬಳಗದ ಮಹಿಳಾ ಸದಸ್ಯರ ನಿಯೋಗವು ಒತ್ತಾಯಿಸಿದೆ.

ಈ ಕುರಿತು ಮೇಯರ್, ಉಪಮೇಯರ್ ಮತ್ತು ವಿರೋಧ ಪಕ್ಷದ ನಾಯಕರಿಗೆ ಮನವಿ ಸಲ್ಲಿಸಿದ ಸದಸ್ಯರು, ಪಾಲಿಕೆಯ ಆಗಸ್ಟ್ ತಿಂಗಳಿನ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಆಯುಕ್ತರು 15 ದಿನದಲ್ಲಿ ವಾರ್ಡ್ ಸಮಿತಿ ರಚನೆ ರ್ಪೂಣಗೊಳಿಸಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ. ಅದರ ಅನುಸಾರ ನಾಗರಿಕರ ವಾರ್ಡ್ ಸಮಿತಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.

ಅನ್ನಪೂರ್ಣ ಅಗಡಿ, ನಿವೃತ್ತ ಮಹಿಳಾ ಪೊಲೀಸ್ ಅಧಿಕಾರಿ ಎಲ್.ಎಸ್. ಮುಗಳಗೇರಿ, ರೂಪಾಲಿ ನರಗುಂದ, ರ್ಪೂಣಿಮಾ ಹಿರೇಮಠ, ದಾಕ್ಷಾಯಿಣಿ ಶಿಂಧೆ, ಸ್ನೇಹ ಜಾಧವ್, ಪ್ರತಿಭಾ ಪವಾರ, ಗಿರಿಜಾ ಹಿರೇಮಠ, ರತ್ನ ಬಸಾಪುರ, ಸುನೀತಾ ಹುಬ್ಳಿಕರ್, ನಿರ್ಮಲಾ ತೋಡ್ಕರ್, ವಾರ್ಡ್ ಸಮಿತಿ ಬಳಗದ ಸಂಚಾಲಕ ಲಿಂಗರಾಜ ಧಾರವಾಡಶೆಟ್ಟರ್, ಡಾ. ಸುಭಾಸ ಬಬ್ರುವಾಡ, ಶಿವಶಂಕರ ಐಹೊಳಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net