ಸೌಜನ್ಯಾ ಕೊಲೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ ರಚಿಸಿ

23HNL3- SOUJANNYA MURDER
Published on

ಹಾನಗಲ್ಲ: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾದಳ ರಚಿಸುವಂತೆ ಆಗ್ರಹಿಸಿ ಪಟ್ಟಣದ ದೇಶಪ್ರೇಮಿಗಳ ಒಕ್ಕೂಟ ಬುಧವಾರ ತಹಸೀಲ್ದಾರರಿಗೆ ಮನವಿ ಅರ್ಪಿಸಿದೆ.


2012ರಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿರುವ ಪ್ರಕರಣ ನಡೆದಿದ್ದು, ಅದರ ತನಿಖೆ ಸಮರ್ಪಕವಾಗಿ ನಡೆದಿಲ್ಲ. ಈ ಪ್ರಕರಣದಲ್ಲಿ ಸಂತೋಷರಾವ್ ಎಂಬ ವ್ಯಕ್ತಿಯನ್ನು ಆರೋಪಿ ಎಂದು ಘೊಷಿಸಿ ತನಿಖೆಗೆ ಇತಿಶ್ರೀ ಹಾಡಿದೆ. ಮುಂದೆ ಸಿಒಡಿ, ಸಿಬಿಐ ಇಲಾಖೆಗಳೂ ತನಿಖೆ ನಡೆಸಿದವು.

ನಂತರ ಸಂತೋಷರಾವ್ ಆರೋಪಿ ಎಂಬುದನ್ನು ಸಾಬೀತುಪಡಿಸುವಲ್ಲಿ ಸಿಬಿಐ ವಿಫಲವಾಗಿದೆ ಎಂದು ಹೇಳಿದೆ. ಇದರಿಂದ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚದಿರುವುದು ಬಹಿರಂಗವಾಗಿದೆ. ಹೀಗಾಗಿ ವಿಶೇಷ ತನಿಖಾ ತಂಡ ರಚಿಸಿ ನಿಜವಾದ ಆರೋಪಿಗಳನ್ನು ಬಂಧಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.


ಒಕ್ಕೂಟದ ಸಂಚಾಲಕ ವಿನಾಯಕ ಕುರುಬರ, ಪದಾಧಿಕಾರಿಗಳಾದ ಎಸ್.ಎಂ. ಕೋತಂಬರಿ, ಅಣ್ಣಪ್ಪ ಚಾಕಾಪುರ, ಹಾಶಂಪೀರ ಇನಾಂದಾರ, ಹನುಮಂತಪ್ಪ ಕೋಣನಕೊಪ್ಪ, ಸಿಕಂದರ ವಾಲಿಕಾರ, ಸುರೇಶ ದೊಡ್ಡಕುರುಬರ, ಮಹೇಶ ಮಕರವಳ್ಳಿ ಇತರರಿದ್ದರು.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net