ಜನ್ಮಾಂತರದ ಕೃತ್ಯಗಳಿಗೆ ಕ್ಷಮಾಪಣೆಯೆ ಪರಿಹಾರ

6-SDP-1 UPANYASA
Published on

ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವು ಮಠದ ಪೀಠಾಧೀಶ್ವರರಾದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳವರ ಚಾತುರ್ವಸ್ಯದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ಜರುಗಿತು.

ಅಪರಾಧ ಕ್ಷಮಾಪಣೆ ಕುರಿತು ಉಪನ್ಯಾಸ ನೀಡಿದ ವಿ. ವಿನಾಯಕ ಭಟ್ಟ ವಾಟೆಕೊಪ್ಪ ಅವರು, ಆಚಾರ್ಯ ಭಗವತ್ಪಾದರ ದೇವ್ಯಪರಾಧ ಕ್ಷಮಾಪಣಾ ಸ್ತೋತ್ರವನ್ನು ಉದಾಹರಿಸುತ್ತ ನಿತ್ಯ ನೈಮಿತ್ತಿಕ ಕಾಮ್ಯ ಕರ್ಮಗಳ ಮಹತ್ವ ತಿಳಿಸಿದರು.

ಮನುಷ್ಯನು ಭವ ಬಂಧನವನ್ನು ಕಳಚಿಕೊಳ್ಳಬೇಕಾದರೆ ಜನ್ಮಾಂತರದಲ್ಲಿ ಮಾಡಿದಂತಹ ಅಪರಾಧಗಳಿಗೆ ಭಗವಂತನಲ್ಲಿ ಕ್ಷಮಾಪಣೆಯೇ ಪರಿಹಾರವಾಗಿದೆ ಎಂದು ವಿವರಿಸಿದರು.

ಶ್ರೀಮಠದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ವಿನಾಯಕ ಭಟ್ಟ ನೆಲೆಮಾವು ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net