ಕುವೈತ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ

-Jafar Sadik Muktasir
Published on

ಕಾರವಾರ: ಕುವೈತ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ, ಹೊನ್ನಾವರ ಹೇರಂಗಡಿ ಮೂಲದ ಜಾಫರ್ ಸಾಽಕ್ ಮುಕ್ತಾಸಿರ್ ಹಲವರಿಗೆ ವಂಚಿಸಿದ್ದು, ಆತನ ಬಗ್ಗೆ ಜನ ಎಚ್ಚರದಿಂದ ಇರಬೇಕು ಎಂದು ಕರ್ನಾಟಕ ಗಡಿನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ದಿಕ್ ತಲಪಾಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಪರಿಚಯಿಸಿಕೊಂಡು, ಜನರಿಂದ 2.80 ಲಕ್ಷದಂತೆ ಜನರಿಂದ ಹಣ ಪಡೆದು, ನಕಲಿ ಆಫರ್ ಲೆಟಕರ್ ಕಳಿಸಿ ಆತ ಕೇರಳದ 33 ಜನರಿಗೆ ವಂಚಿಸಿದ್ದು, ಆಗಸ್ಟ್ 24 ರಂದು ಹೊನ್ನಾವರ ಠಾಣೆಯಲ್ಲಿ ಬಿಜ್ಜು ದಾಮೋದರ್ ಎಂಬುವವರು ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ತನಿಖೆ ನಡೆಸಿದ್ದು, ಮೋಸಕ್ಕೆ ಒಳಗಾದ ಇತರರೂ ಠಾಣೆಯಲ್ಲಿ ಬಂದು ದೂರು ದಾಖಲಿಸಿದ್ದಾರೆ. ಜಾಫರ್ ಸಾದಿಕ್ ತನ್ನ ಸ್ವಂತ ಊರಿನಲ್ಲಿ ದಾನ ಮಾಡಿಕೊಂಡು ಒಳ್ಳೆಯ ವ್ಯಕ್ತಿಯಂತೆ ಗುರುತಿಸಿಕೊಂಡಿದ್ದಾನೆ. ಬೇರೆ ದೇಶಗಳ ಸಂಖ್ಯೆ ಉಪಯೋಗಿಸಿಕೊಂಡು

ಕರೆ ಮಾಡಿ ಇನ್ನೂ ಕೆಲವರಿಗೆ ವಂಚನೆ ಮಾಡುತ್ತಿರುವುದು ಕಂಡುಬAದಿದೆ. ಆತನ ಜತೆ ನೌಶಾದ್ ಖ್ವಾಜಾ ದಾವೂದ್ ಹಾಗೂ ಹೈದ್ರಾಬಾದ್ ಮೂಲಕ ಸುಜಾತಾ ಜಮ್ಮಿಕುಂಟ ಎಂಬುವವರೂ ಇರುವುದು ತಿಳಿದುಬಂದಿದೆ.

ತಕ್ಷಣ ವಂಚಕನನ್ನು ಬಂಧಿಸಿ ಕ್ರಮ ವಹಿಸಬೇಕು. ಅಲ್ಲದೇ ಆತನ ಬಗ್ಗೆ ಜನ ಎಚ್ಚರದಿಂದ ಇರಬೇಕು ಎಂದರು. ವಂಚನೆಗೊಳಗಾದ ಅನಸ್, ಮೊಹಮದ್ ಆಶೀಮ್, ನೌಶಾದ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net