ಜನರಿಗೆ ಚಿರ ಋಣಿಯಾಗಿರುವೆ

Forever indebted to the people
ಚಡಚಣ ಪಟ್ಟಣದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರನ್ನು ಮೆರವಣಿಗೆ ಮಾಡಲಾಯಿತು. ಕಾಂತುಗೌಡ ಪಾಟೀಲ, ಭೀಮುಸಾಹುಕಾರ ಬಿರಾದಾರ ಹತ್ತಳಿ, ಸಂಜೀವ ಐಹೊಳ್ಳಿ ಇತರರಿದ್ದರು.
Published on

ಚಡಚಣ: ಸತತ 48 ವರ್ಷ ರಾಜಕಾರಣದಲ್ಲಿದ್ದು, ಜಿಲ್ಲೆಯ ಪ್ರತಿಯೊಂದು ಗ್ರಾಮದ ಜನರನ್ನು ಪ್ರೀತಿಯಿಂದ ಕಂಡು ರಾಜಕಾರಣ ಮಾಡುತ್ತ ಬಂದಿದ್ದೇನೆ. ನಾನು ಭಾವನಾತ್ಮಕ ರಾಜಕಾರಣಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಪಟ್ಟಣದ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇಂಡಿ ಮತ್ತು ಚಡಚಣ ನನ್ನ ಹೃದಯವಿದ್ದಂತೆ. ನನ್ನನ್ನು ರಾಜಕೀಯದಲ್ಲಿ ಬೆಳೆಸಲು ಅಮೂಲ್ಯ ಮತಗಳನ್ನು ನೀಡಿರುವ ಜನರಿಗೆ ಚಿರ ಋಣಿಯಾಗಿರುತ್ತೇನೆ.

ನನ್ನ ರಾಜಕೀಯ ಗುರುಗಳಾದ ಜೆ.ಎಚ್​.ಪಟೀಲ, ರಾಮಕೃಷ್ಣ ಹೆಗಡೆ ಅವರು ನನ್ನ ಬೆನ್ನು ಹಿಂದೆ ಇರುವವರೆಗೆ ಹಾಗೂ ನನ್ನನ್ನು ಪ್ರೀತಿಸುವ ಜನರಿರುವವರೆಗೂ ನಾನು ಯಾವತ್ತೂ ಅಂಜುವುದಿಲ್ಲ. ದಲಿತ ಮನೆತನದಲ್ಲಿ ಹುಟ್ಟಿದ ನಾನು ಬಸವಣ್ಣನವರ ಚಿಂತನಗಳನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದೇನೆ ಎಂದು ಭಾವುಕರಾದರು.

ಬಿಜೆಪಿ ಮುಖಂಡ ಸಂಜೀವ ಐಹೊಳ್ಳಿ ಮಾತನಾಡಿ, ಸೌಮ್ಯ ಸ್ವಭಾವದ ಸಂಸದರಾದ ರಮೇಶ ಜಿಗಜಿಣಗಿ ಅವರನ್ನು ತಮ್ಮ ಪ್ರೀತಿ ವಿಶ್ವಾಸದಿಂದ ಏಳನೇ ಬಾರಿ ಸಂಸದರಾಗಿ ಆಯ್ಕೆಯಾಗುವಲ್ಲಿ ಶ್ರಮ ವಹಿಸಿದ ಕಾರ್ಯಕರ್ತರಿಗೆ ಧನ್ಯವಾದಗಳು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯ ಶ್ರೀಶೈಲಗೌಡ ಬಿರಾದಾರ, ಸದಸ್ಯ ಭೀಮುಸಾಹುಕಾರ ಬಿರಾದಾರ ಹತ್ತಳಿ, ಮಂಡಲ ಅಧ್ಯ ಕಾಂತುಗೌಡ ಪಾಟೀಲ, ತಾ.ಪಂ ಸದಸ್ಯ ರಾಜು ಝಳಕಿ, ಮಂಡಲ ಮಾಜಿ ಅಧ್ಯ ರಾಮ ಅವಟಿ, ಮುಖಂಡರಾದ ಚಿದಾನಂದ ಚಲವಾದಿ, ಡೊಳ್ಳಿ ಸಾಹುಕಾರ, ಶಿವಾನಂದ ಮಕಣಾಪುರ, ಧಮುರ್ ಖವೇಕರ, ನಾಗನಾಥಗೌಡ ಬಿರಾದಾರ ತದ್ದೆವಾಡಿ, ಚಂದ್ರಕಾಂತ ನಿರಾಳೆ, ಮುದುಕಣ್ಣ ಹತ್ತರಕಿ ಶಿರಾಡೋಣ, ರಮೇಶ ಜಿತ್ತಿ, ಸಿದ್ದು ಬಗಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net