ಆಲ್ದೂರು ಸುತ್ತಮುತ್ತ ಕಾಡಾನೆ ಹಾವಳಿ

coffe
ಬನ್ನೂರು ಗ್ರಾಮದ ಕಾಫಿ ತೋಟದಲ್ಲಿ ಬಾಳೆ, ಕಾಫಿಗಿಡಗಳನ್ನು ನಾಶ ಮಾಡಿರುವುದು.
Published on

ಆಲ್ದೂರು: ಎರಡು ದಿನಗಳಿಂದ ಪಟ್ಟಣದ ಸುತ್ತಮುತ್ತ ಕಾಡಾನೆಗಳು ಸಂಚರಿಸಿ ಅಡಕೆ, ಬಾಳೆ, ಕಾಫಿ ಗಿಡಗಳನ್ನು ನಾಶ ಮಾಡಿವೆ.

ಗುರುವಾರ ರಾತ್ರಿ ಪಟ್ಟಣದ ಹವ್ವಳ್ಳಿ ಮೂಲಕ ಹೋಗಿರುವ ಕಾಡಾನೆಗಳು ಅರಣ್ಯಇಲಾಖೆ ಕಚೇರಿ ಮುಂದೆ ಮೋಹನ್ ಎಂಬುವರ ಅಡಕೆ, ಕಾಫಿಗಿಡ ಹಾಗೂ ಬಾಳೆಗಿಡಗಳನ್ನು ನಾಶಪಡಿಸಿವೆ.
ಒಂದು ಗುಂಪಿನಲ್ಲಿ 5 ಕಾಡಾನೆಗಳಿದ್ದು ಈ ಗುಂಪಿಗೆ ಇಳೆಖಾನ್ ಭಾಗದಲ್ಲಿದ್ದ 2 ಕಾಡಾನೆಗಳು ಸೇರಿಕೊಂಡು ಒಟ್ಟು 7 ಕಾಡಾನೆಗಳು ಕೃಷಿ ಜಮೀನಿಗೆ ನುಗ್ಗಿ ಹಾಳು ಮಾಡುತ್ತಿವೆ. ಮನೆಗಳ ಮುಂಭಾಗದ ಗೇಟ್‌ಗಳನ್ನು ಮುರಿದು ಹಾಕುತ್ತಿವೆ. ಸದ್ಯ ಆನೆಗಳು ಬನ್ನೂರು ಗ್ರಾಮದ ಕಾಫಿ ತೋಟದಲ್ಲಿವೆ ಎಂದು ತಿಳಿದುಬಂದಿದೆ.
ಎರಡು ದಿನಗಳಿಂದ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂಜರಿಯುತ್ತಿದ್ದಾರೆ. ಪಟ್ಟಣದ ಸುತ್ತಮುತ್ತ ಆನೆಗಳು ಸಂಚರಿಸುತ್ತಿರುವ ಮಾಹಿತಿ ದೊರೆತ ತಕ್ಷಣ ತೋಟದ ಮಾಲೀಕರು ಕಾರ್ಮಿಕರಿಗೆ ಕೆಲಸಕ್ಕೆ ರಜೆ ನೀಡಿದ್ದು ಶುಕ್ರವಾರ ಜನರ ಸಂಚಾರ ವಿರಳವಾಗಿತ್ತು.
ಸಂಜೆ ಜನರು ಮನೆಗೆ ತೆರಳುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳು ಇರುವ ಮಾಹಿತಿ ನೀಡಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net