ಗ್ರಾಮದಲ್ಲಿ ಬೀಡು ಬಿಟ್ಟ ಕಾಡಾನೆಗಳು

eliphant
Published on

ಕೊಡಗು : ಸೋಮವಾರಪೇಟೆ ಶಾಂತಳ್ಳಿ ಹೋಬಳಿಯ ಬೆಟ್ಟದಕೊಪ್ಪ ಮತ್ತು ಕಾಕನಕೊಪ್ಪಲು ಗ್ರಾಮದಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು ಕೃಷಿಕರು ಭಯಭೀತರಾಗಿದ್ದಾರೆ.


ಕಾಜೂರು ಮೀಸಲು ಅರಣ್ಯದಿಂದ 9 ಕಾಡಾನೆಗಳು ಬೆಟ್ಟದಕೊಪ್ಪ ದೇವರಕಾಡಿನಲ್ಲಿ ಉಳಿದುಕೊಂಡಿವೆ. ಮೀಸಲು ಅರಣ್ಯದಲ್ಲಿ ಆಹಾರ, ನೀರಿನ ಕೊರತೆಯಿಂದ ಕಾಡಾನೆಗಳು ಗ್ರಾಮದ ಕಡೆಗೆ ಬಂದಿವೆ ಎನ್ನಲಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಹರಸಾಹಸ ಪಡುತ್ತಿದ್ದಾರೆ. ಶುಕ್ರವಾರ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಡಿಆರ್‌ಎಫ್‌ಒ ಸತೀಶ್ ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net