ಅಡವಿಬಾವಿಯಲ್ಲಿ ಆರನೇ ತರಗತಿ ಆರಂಭಿಸಿ

14ಟಿವಿಜಿP03
ಅಡವಿಬಾವಿ ಗ್ರಾಮದಲ್ಲಿ ಆರನೇ ತರಗತಿ ಆರಂಭಿಸಲು ಒತ್ತಾಯಿಸಿ ಪಾಲಕರು ಬಿಇಒ ಸುರೇಂದ್ರ ಕಾಂಬಳೆಗೆ ಮನವಿ ಸಲ್ಲಿಸಿದರು. ಎಸ್ಡಿಎಂಸಿ ಅಧ್ಯಕ್ಷ ಹುಲ್ಲಪ್ಪಬಿಂಗಿ, ಕಲ್ಯಾಣ ಕುಮಾರ ಮಾಲಗತ್ತಿ, ಪಾಲಕರಾದ ಹನಮೇಶ ನಾಯಕ, ಭೀಮನಗೌಡ ಪಾಟೀಲ್, ವಿದ್ಯಾರ್ಥಿಗಳಾದ ಅಭಿಷೇಕ, ಅಮೃತಾ, ಅಂಕಿತಾ, ಅಮರೇಶ, ಅಪೂರ್ವ ಇತರರಿದ್ದರು.
Published on

ತಾವರಗೇರಾ: ಸಮೀಪದ ಅಡವಿಬಾವಿ ಗ್ರಾಮದ ಪ್ರಾಥಮಿಕ ಶಾಲೆಗೆ ಬಿಇಒ ಸುರೇಂದ್ರ ಕಾಂಬಳೆ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೋಮನಗೌಡ ಪಾಟೀಲ್ ಸೋಮವಾರ ಭೇಟಿ ನೀಡಿದರು.

ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿ ಆರಂಭಿಸುವಂತೆ ಒತ್ತಾಯಿಸಿ ಜು.15ರಂದು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದ್ದರು. ಹೀಗಾಗಿ ಅಧಿಕಾರಿಗಳ ಶಾಲೆಗೆ ಭೇಟಿ ನೀಡಿ ಗ್ರಾಮದ ಹಿರಿಯರು ಹಾಗೂ ಶಾಲಾಭಿವೃದ್ಧಿ ಮಂಡಳಿ ಜತೆ ಮಾತುಕತೆ ನಡೆಸಿದರು. ಶೀಘ್ರದಲ್ಲೇ ಆರನೇ ತರಗತಿ ಆರಂಭಿಸುವುದಾಗಿ ಭರವಸೆ ನೀಡಿದರು.

ಅಡವಿಬಾವಿಯಲ್ಲಿ ಐದನೇ ತರಗತಿವರೆಗೆ ಶಾಲೆ ಇದೆ. ಮುಂದಿನ ಶಿಕ್ಷಣಕ್ಕಾಗಿ 3 ಕಿ.ಮೀ. ದೂರದ ಸಾಸ್ವಿಹಾಳ ಗ್ರಾಮಕ್ಕೆ ತೆರಳುವ ಸ್ಥಿತಿ ಇದೆ. ಪಾಲಕರು ಕಳೆದ ಎರಡು ಮೂರು ತಿಂಗಳಿಂದೆ ಶಿಕ್ಷಣಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಅದರೆ, ಯಾರೂ ಈ ಕಡೆ ಗಮನಹರಿಸಿಲ್ಲ. ಇದರಿಂದ ಬೇಸತ್ತ ಮಕ್ಕಳು ತರಗತಿ ಬಹಿಷ್ಕಾರ ಮಾಡಲು ತೀರ್ಮಾನಿಸಿದ್ದರು.

ಎಸ್ಡಿಎಂಸಿ ಅಧ್ಯಕ್ಷ ಹುಲ್ಲಪ್ಪಬಿಂಗಿ, ಕಲ್ಯಾಣ ಕುಮಾರ ಮಾಲಗತ್ತಿ, ಪಾಲಕರಾದ ಹನಮೇಶ ನಾಯಕ, ಭೀಮನಗೌಡ ಪಾಟೀಲ್, ವಿದ್ಯಾರ್ಥಿಗಳಾದ ಅಭಿಷೇಕ, ಅಮೃತಾ, ಅಂಕಿತಾ, ಅಮರೇಶ, ಅಪೂರ್ವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net