ಅರಣ್ಯ ಸಂಪತ್ತು ವೃದ್ಧಿಸುವ ಕೆಲಸವಾಗಲಿ

1
ಅಥಣಿ ಪಟ್ಟಣದ ರಾಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಆರ್.ಎಂ.ಡಾಂಗೆ, ರೇಹಾನ ಡಾಂಗೆ, ಮೊಹಮ್ಮದ್ ಜಹಾಂಗೀರ, ಎ.ಎಚ್.ಮುಲ್ಲಾ ಇತರರು ಇದ್ದರು.
Published on

ಅಥಣಿ: ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಹೆಚ್ಚು ಸಸಿಗಳನ್ನು ನೆಟ್ಟು ಉತ್ತಮ ಪರಿಸರ ನಿರ್ಮಿಸುವ ಕೆಲಸ ಮಾಡಬೇಕು ಎಂದು ರಾಯಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಫೀಕ್ ಡಾಂಗೆ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತ, ಶಿವಯೋಗಿ ವೃತ್ತ ಹಾಗೂ ಬಸವೇಶ್ವರ ವೃತ್ತದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಯಲ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಈಚೆಗೆ ಹಮ್ಮಿಕೊಂಡಿದ್ದ ಹಸಿರೇ ಉಸಿರು ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಸಿ ಪೋಷಣೆ ಮಾಡುವ ಮೂಲಕ ಅರಣ್ಯ ಸಂಪತ್ತು ವೃದ್ಧಿಸುವ ಕೆಲಸ ಮಾಡಬೇಕು ಎಂದರು.

ರೇಹಾನ್ ಡಾಂಗೆ, ಮೊಹಮ್ಮದ ಜಹಾಂಗೀರ, ಎ.ಎಚ್.ಮುಲ್ಲಾ, ಸುರೇಶ ಬುರ್ಲಿ, ಆಸಿಯಾ ಪಟೇಲ್, ಅಕ್ಷತಾ ಜಿರಗಾಳ, ಅಮೃತಾ ಕುಲಕರ್ಣಿ, ತಜಮೀಂ ನಸರಲಿ, ಪರಶುರಾಮ ನಾಟೆಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net