ಅರಣ್ಯ ಅತಿಕ್ರಮ ಪ್ರವೇಶ ಮಾಡಿದ್ದವನ ಸೆರೆ

18-kollegalphoto-5
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಜಾಗೇರಿ ಶಾಖೆಯ ತಿಲುವೇಪುರ ಗಸ್ತಿನ ಎಲೆಪಾತಿ ಮೇಡು ಅರಣ್ಯ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿ ಬೆಂಕಿ ಹಚ್ಚಿದ್ದ ಆರೋ ಪದಡಿ ಬಂಧನಕ್ಕೊಳಗಾಗಿರುವ ಮೊದಲೆಮುತ್ತು ಜತೆ ಯು.ಜಿ ಭರತ್, ಬಿ.ಎಂ. ನಂದೀಶ್ ಇದ್ದರು.
Published on

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಜಾಗೇರಿ ಶಾಖೆಯ ತಿಲುವೇಪುರ ಗಸ್ತಿನ ಎಲೆಪಾತಿ ಮೇಡು ಅರಣ್ಯ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿ ಬೆಂಕಿ ಹಚ್ಚಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಮಂಗಳವಾರ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಜಾಗೇರಿಯ ಶಿಲುವೆಪುರ ಗ್ರಾಮದ ಮೊದಲೆಮುತ್ತು (47) ಬಂಧಿತ ಅರೋಪಿ. ಈತ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಕೊಳ್ಳೇಗಾಲ ಬಫರ್ ವಲಯದ ಕಾವೇರಿ ಎಕ್ಸ್‌ಟೆನ್ಷನ್ ವೈಡ್ ಲೈಫ್ ಸೆಂಚುರಿಯಲ್ಲಿ ಬರುವ ತಿಲುವೇಪುರ ಗಸ್ತಿನ ಎಲೆಪಾತಿ ಮೇಡು ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕಿದ್ದ ಆರೋಪದಲ್ಲಿ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ. ಚಕ್ರಪಾಣಿ, ಕೊಳ್ಳೇಗಾಲ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ಶಿವರಾಮ್ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಬಫರ್ ವಲಯದ ವಲಯ ಅರಣ್ಯಾಧಿಕಾರಿ ಯು.ಜಿ. ಭರತ್ ನೇತೃತ್ವದಲ್ಲಿ ಸತ್ತೇಗಾಲ ಜಾಗೇರಿ ಶಾಖೆಯ ಉಪವಲಯ ಅರಣ್ಯಾಧಿಕಾರಿ ಬಿ.ಎಂ.ನಂದೀಶ್ ಹಾಗೂ ಸಿಬ್ಬಂದಿ ಆರೋಪಿಯನ್ನು ದಸ್ತಗರಿ ಮಾಡಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net