ತಸ್ಕರರಿಗೆ ಸಿಂಹಸ್ವಪ್ನವಾಗಿದ್ದ ಆಸ್ಕರ್ ಸಾವು

Dog Named Oskar
Published on

ದಾಂಡೇಲಿ: ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ತರಲಾಗಿದ್ದ ತರಬೇತಿ ಪಡೆದ ‘ಆಸ್ಕರ್’ ಹೆಸರಿನ ಶ್ವಾನ ಅನಾರೋಗ್ಯದಿಂದ ಶನಿವಾರ ಮೃತಪಟ್ಟಿದೆ.
ವನ್ಯಜೀವಿ ಹತ್ಯೆ ಹಾಗೂ ಅರಣ್ಯದಲ್ಲಿ ಕಳ್ಳಸಾಗಾಣಿಕೆ ತಡೆಯಲು ಶೀಘ್ರದಲ್ಲಿ ವನ್ಯಜೀವಿ ಇಲಾಖೆಯ ತಪಾಸಣೆ ತಂಡವನ್ನು ಆಸ್ಕರ್ ಶ್ವಾನ ಸೇರ್ಪಡೆಗೊಳ್ಳುವುದಿತ್ತು. ಸಾಗವಾನಿ ಬಡ್ಡಿಯಲ್ಲಿರುವ ಹುಳು ಕಡಿತದ ಪರಿಣಾಮ ನಾಯಿಗೆ ತೀವ್ರ ಜ್ವರದಿಂದ ನರಳುತ್ತಿತ್ತು.
ಶಿರಸಿ, ಬೆಳಗಾವಿ ಮತ್ತು ಗೋವಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ, ಭಾನುವಾರ ಅರಣ್ಯ ಇಲಾಖೆ ಸಿಬ್ಬಂದಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ನಂತರ ಕುಳಗಿ ನೇಚರ್ ಕ್ಯಾಂಪ್ ಬಳಿ ಅಂತ್ಯಕ್ರಿಯೆ ನೆರವೇರಿಸಿದರು. ವನ್ಯಜೀವಿ ವಿಭಾಗದ ದಾಂಡೇಲಿಯ ಎಸಿಎಫ್ ಎಸ್.ಎಸ್. ನಿಂಗಾಣಿ, ಆರ್‌ಎಫ್‌ಒ ಮಾಂತೇಶ ಪಾಟೀಲ, ಪಶು ವೈದ್ಯೆ ಅರ್ಚನಾ, ಇತರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net