ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿಯಾಗಲಿ

9 MANVI 01
ಮಾನ್ವಿ ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಕರ್ನಾಟಕ ರೈತ ಸಂಘ ತಾಲುಕು ಘಟಕದಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ವೀರೇಶನಾಯಕ, ನಾಗರಾಜ ಬೊಮ್ಮನಾಳ, ಮಲ್ಲಯ್ಯನಾಯಕ, ಗಜೇಂದ್ರ ಕಲ್ಲೂರು, ಶಿವಯ್ಯನಾಯಕ, ಹನುಮಂತ ಕುಂಬಾರ, ಕೃಷ್ಣ ಮೂರ್ತಿ ಗುಡ್ಡದಿನ್ನಿ, ಶಿವರಾಜ ನಾಯಕ, ಮಲ್ಲೇಶ, ಫಕೀರಪ್ಪ, ಮೌಲಾಸಾಬ್, ವೆಂಕಟೇಶನಾಯಕ, ಹುಲಿಗೆಪ್ಪ ಇನ್ನಿತರರು ಇದ್ದರು.
Published on

ಮಾನ್ವಿ: ರಾಜ್ಯದ ಎಲ್ಲಾ ಭೂಹಿನರಿಗೆ ಜಮೀನು, ವಸತಿರಹಿತರಿಗೆ ವಸತಿ ನೀಡಬೇಕೆಂದು ಕರ್ನಾಟಕ ರೈತ ಸಂಘದ ತಾಲೂಕು ಘಟಕದಿಂದ ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಅಶೋಕ ನೀಲ್‌ಗಲ್ ಮಾತನಾಡಿ, ಅಖಿಲ ಭಾರತ ಯುನೈಟೆಡ್ ಕಿಸಾನ್ ಸಭಾವತಿಯಿಂದ ಜ.9 ರಂದು ಅಖಿಲ ಭಾರತ ಹಕ್ಕೋತ್ತಾಯ ದಿನವೆಂದು ರಾಷ್ಟ್ರವ್ಯಾಪಿಯಾಗಿ ಆಚರಿಸಲಾಗುತ್ತಿದೆ.

ನರೇಗಾ ಯೋಜನೆಯಲ್ಲಿ ವಾರ್ಷಿಕ ಪ್ರತಿ ಕುಟುಂಬಕ್ಕೆ 200 ದಿನಗಳ ಕೂಲಿ ಕೆಲಸ ನಿಗದಿಪಡಿಸಬೇಕು. ರಾಷ್ಟ್ರದ ಎಲ್ಲಾ ರೈತರ, ಕೃಷಿ ಕಾರ್ಮಿಕರ ಸಂಪೂರ್ಣ ಸಾಲ ಮನ್ನಾಮಾಡಬೇಕು. ಸಾಮಾಜಿಕ, ಆರ್ಥಿಕ ಮತ್ತು ರಾಜಕಿಯ ರಂಗದಲ್ಲಿ ನ್ಯಾಯ ಒದಾಗಿಸಬೇಕು. ಅರಣ್ಯ ಹಕ್ಕು ಕಾಯ್ದೆ 2006 ಸಮರ್ಪಕವಾಗಿ ಜಾರಿಗೆ ತರಬೇಕು. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net