

ಕುಶಾಲನಗರ:
ಕುಶಾಲನಗರ ತಾಲೂಕು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿರೂಪಾಕ್ಷಪುರ ಗ್ರಾಮ ಅರಣ್ಯ ಸಮಿತಿಗೆ ನೂತನವಾಗಿ ಪದಾಧಿಕಾರಗಳನ್ನು ನೇಮಕ ಮಾಡಲಾಗಿದೆ. ಈ ಸಂಬAಧ ಗ್ರಾಮದ ಹೆಬ್ಬಾಗಿಲಿನಲ್ಲಿ ಅರಣ್ಯ ಸಮಿತಿ ನಾಮಫಲಕವನ್ನು ಗಿರಿಜನ ಮುಖಂಡರೂ ಆದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಕೆ. ಚಂದ್ರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಗಿರಿಜನ ನಿವಾಸಿಗಳೂ ಸೇರಿದಂತೆ ಇತರೇ ನಿವಾಸಿಗಳಿಗೆ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಗ್ರಾಮದ ನಿವಾಸಿಗಳು ಸಂಘಟಿತರಾಗಿ ಹೋರಾಟ ನಡೆಸುವ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಗ್ರಾಮ ಅರಣ್ಯ ಸಮಿತಿ ರಚಿಸಲಾಗಿದೆ ಎಂದರು.
ಈ ಸಂದರ್ಭ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಹೆಚ್.ಕೆ.ಗಿರೀಶ, ಉಪಾಧ್ಯಕ್ಷೆ ಹೆಚ್.ಕೆ. ಗಿರಿಜಾ,
ಕಾರ್ಯದರ್ಶಿ ಕೆ.ಟಿ. ಕೇಶವ, ಗ್ರಾಮದ ಯಜಮಾನ ಪಿ.ಹೆಚ್. ದೇವರಾಜು, ಸದಸ್ಯರುಗಳಾದ ಬಿ.ಟಿ. ಪೊನ್ನಪ್ಪ, ಸಿ.ಆರ್. ಪದ್ಮಾವತಿ, ಎನ್.ಶೀಬಾ, ಹೆಚ್.ಟಿ. ಜಯ, ಎಂ.ಎ. ಬಶೀರ್, ಕೆ.ಎಸ್. ಮಣಿ, ಕೆ.ಎಂ. ಅಬ್ಬಾಸ್, ಹೆಚ್.ಎಸ್. ಶಾರದಾ, ಕೆ.ಜಿ. ಮಂಜುನಾಥ ಇದ್ದರು.