ಬನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಮತ್ತು ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು. ಗುರುಪ್ರಸಾದ್ ಆಚಾರ್ಯ ಪಿ., ಸುಬ್ಬಯ್ಯ ನಾಯ್ಕ, ಕಿರಣ್ ಬಿ.ಎಂ. ಇತರರು ಇದ್ದರು.
ಪುತ್ತೂರು: ಪರಿಸರ ದಿನಾಚರಣೆ, ವನಮಹೋತ್ಸವ ಕಾರ್ಯಕ್ರಮದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕು. ಕಾಳಜಿಯಿಂದ ಪರಿಸರವನ್ನು ಉಳಿಸುವ ಕಾರ್ಯವಾಗಬೇಕು. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ. ಪರಿಸರ ಇಲ್ಲದೆ ಬದುಕಲು ಸಾಧ್ಯವಿಲ್ಲ. ಮುಂದಿನ ಪೀಳಿಗೆಗೆ ಪರಿಸರ ಉಳಿಸುವ ಅಗತ್ಯವಿದ್ದು ಮಕ್ಕಳ ಹೆಸರಿನಲ್ಲಿ ಗಿಡ ನೆಟ್ಟು ಪೋಷಿಸುವ ಕಾರ್ಯವಾಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಬನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆಯ ಮಂಗಳೂರು ವಿಭಾಗ, ಪುತ್ತೂರು ವಲಯ ವತಿಯಿಂದ ವನಮಹೋತ್ಸವ ಮತ್ತು ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರುಪ್ರಸಾದ್ ಆಚಾರ್ಯ ಪಿ. ವಹಿಸಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ ಉಪಸ್ಥಿತರಿದ್ದರು. ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ. ಸ್ವಾಗತಿಸಿದರು. ಉಪ ವಲಯ ಅರಣ್ಯಾಧಿಕಾರಿ ಉಲ್ಲಾಸ್ ವಂದಿಸಿದರು. ಮುಖ್ಯಶಿಕ್ಷಕ ಮಹಮ್ಮದ್ ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.
ಶಾಲೆಯಲ್ಲಿ ಹಣ್ಣು ಹಂಪಲು ಗಿಡ
ಅರಣ್ಯ ಇಲ್ಲದ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಯೋಜನೆಡಿ ೧೫೦ಕ್ಕೂ ಹೆಚ್ಚು ಗಿಡಗಳನ್ನು ಶಾಲೆಯ ಆವರದಲ್ಲಿ ವ್ಯವಸ್ಥಿತವಾಗಿ ನೆಡಲಾಗಿದೆ. ವರ್ಷದ ಹಿಂದೆ ನೆಟ್ಟ ನೆಲ್ಲಿ, ಮಾವು, ಹಲಸು, ಪುನರ್ಪುಳಿ, ಮಂತುಪುಳಿ ಸೇರಿ ವಿವಿಧ ಹಣ್ಣಿನ ಗಿಡಗಳನ್ನು ಶಾಲಾಭಿವೃದ್ಧಿ ಸಮಿತಿ ಪೋಷಿಸಿಕೊಂಡು ಬರುತ್ತಿದೆ.
"
ಅಭಿವೃದ್ಧಿಯ ಹೆಸರಿನಲ್ಲಿ ಬೃಹತ್ ಮರಗಳನ್ನು ಕಡಿಯಲಾಗಿದೆ. ಆದರೆ ಇದಕ್ಕೆ ಪರ್ಯಾಯವಾಗಿ ಗಿಡ ನೆಡುವ ಕಾರ್ಯವಾಗಿಲ್ಲ. ಮರ ತುಂಡರಿಸಲು ನಿಮಿಷ ಸಾಕು, ಆದರೆ ಬೆಳೆಯಲು ವರ್ಷಗಳೇ ಬೇಕಾಗುತ್ತದೆ. ಮುಂದಿನ ಪೀಳಿಗೆಗೆ ಪರಿಸವನ್ನು ಉಳಿಸುವ ಕೆಲಸವಾಗಬೇಕು. ಗಿಡಗಳ ಸಂರಕ್ಷಣೆಗೆ ಸ್ವಂತ ನಿಽಯಿಂದ ೨೦ ಲಕ್ಷ ರೂ. ಅನುದಾನ ನೀಡಲಾಗಿದೆ. ರಸ್ತೆ ಕೆಲಸ ಮಾಡುವವರಿಗೆ ಗಿಡಗಳ ಬಗ್ಗೆ ಕಾಳಜಿಯಿಲ್ಲ.