

ಬಳ್ಳಾರಿ: ಗ್ರಾಮಕ್ಕೆ ನುಗ್ಗಿದ ಕರಡಿ ಏಕಾಏಕಿ ಗ್ರಾಮದ ಮಧ್ಯಭಾಗದಲ್ಲಿದ್ದ ಬೇವಿನ ಮರ ಏರಿ ಕುಳಿತು ಕೆಲಕಾಲ ಆತಂಕ ಸೃಷ್ಟಿಸಿತ್ತು.
ಸಂಡೂರು ತಾಲೂಕಿನ ಕುರೆಕುಪ್ಪ ಗ್ರಾಮಕ್ಕೆ ನಿನ್ನೆ ರಾತ್ರಿ ಬಂದಿದ್ದ ಕರಡಿ, ಮರವೇರಿ ಕುಳಿತುಬಿಟ್ಟಿದೆ. ಗ್ರಾಮಸ್ಥರಿಂದ ಹೆದರಿ ಕೆಳಗಿಳಿದಿರಲಿಲ್ಲ. ಅರಣ್ಯಾಧಿಕಾರಿಗಳಿಗೆ ಮಾಹಿತಿ ಮುಟ್ಟಿಸಲಾಯಿತು.
ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಕರಡಿಯನ್ನು ಕೆಳಗಿಳಿಸಲು ಹರಸಾಹಸ ಪಡಬೇಕಾಯಿತು. ಬೆಳಗಿನ ಜಾವ ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು ಮಧ್ಯಾಹ್ನದ ನಂತರ ಕೆಳಗಿಳಿಸಲಾಯಿತು.
ಹೆಚ್ಚಿನ ಜನರು ಜಮಾಯಿಸಿದ್ದರಿಂದ ಗಾಬರಿಗೊಂಡ ಕರಡಿಯನ್ನು ಅರವಳಿಕೆ ಮದ್ದು ನೀಡಿ, ಕ್ರೇನ್ ಮೂಲಕ ಕರಡಿಯನ್ನು ಕೆಳಗಿಳಿಸಲಾಯಿತು. (ದಿಗ್ವಿಜಯ ನ್ಯೂಸ್)