

ಎನ್.ಆರ್.ಪುರ: ಅರಣ್ಯ ಒತ್ತುವರಿ ತೆರವಿನ ವಿಚಾರದಲ್ಲಿ ಅರಣ್ಯ ಅಧಿಕಾರಿಗಳನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಮುತ್ತಿನಕೊಪ್ಪ ಜನಜಾಗೃತಿ ವೇದಿಕೆ ಅಧ್ಯಕ್ಷ ಸಿ.ಎಲ್.ಮನೋಹರ್ ಹೇಳಿದ್ದಾರೆ.
ಜನ ಪ್ರತಿನಿಧಿಗಳು ಮಾಡಿರುವ ಕಾನೂನುಗಳನ್ನ ಅಧಿಕಾರಿಗಳು ಪಾಲಿಸುತ್ತಿದ್ದಾರೆ ಹೊರತು ಅರಣ್ಯ ಇಲಾಖೆ ಅಧಿಕಾರಿಗಳು ಸ್ವತಃ ಕಾನೂನು ಜಾರಿಗೊಳಿಸಿ ಅದನ್ನು ರೈತರ ಮೇಲೆ ಹೇರಿಕೆ ಮಾಡುತ್ತಿಲ್ಲ. ಸೊಪ್ಪಿನ ಬೆಟ್ಟ, ಕಂದಾಯ ಭೂಮಿ, ಗೋಮಾಳ, ಪರಿಭಾವಿತ ಅರಣ್ಯ ,ಕಿರುಅರಣ್ಯ, ಗ್ರಾಮ ಠಾಣಾ ,ಮೀಸಲು ಅರಣ್ಯ ಈ ಎಲ್ಲ ಭೂಮಿ ಸರ್ಕಾರದ ಸ್ವತ್ತಾಗಿದೆ. ಸರ್ಕಾರಗಳೇ ಜಮೀನು ಮಂಜೂರಾತಿಗೆ ಅರ್ಜಿ ಆಹ್ವಾನಿಸಿವೆ. ಾರ್ಮ್ ನಂ. 50,53,57, 94 ಸಿ, 90ಸಿಸಿ. 2015ರ ಪಾರಂಪರಿಕ ಅರಣ್ಯಹಕ್ಕು ಕಾಯ್ದೆ, ಭೂಮಿ ಗುತ್ತಿಗೆ ನೀಡುವ ಕಾಯ್ದೆಗಳು ರೈತರಿಗೆ ಜಮೀನಿನ ಹಕ್ಕು ಪಡೆಯಲು ಕಲ್ಪಿಸಿಕೊಟ್ಟ ಅವಕಾಶಗಳಾಗಿವೆ. ಸರ್ಕಾರ ಕುಟುಂಬಕ್ಕೆ ನಿಗಪಡಿಸಿದ ಕನಿಷ್ಠ ಅಥವಾ ಗರಿಷ್ಠ ಒತ್ತುವರಿ ಹೊರತುಪಡಿಸಿ ಉಳಿದ ಜಮೀನನ್ನು ಕಂದಾಯ, ಅರಣ್ಯ ಇಲಾಖೆಗೆ ಹಸ್ತಾಂತರಿಸ ಬೇಕು ಎನ್ನುವ ವಿಚಾರದ ಗಮನ ಸೆಳೆಯಲು ರೈತರ ಹೋರಾಟ ವಿಲವಾಗಿದೆ ಎಂದು ಹೇಳಿಕೆಯಲ್ಲಿ ದೂರಿದ್ದಾರೆ.
ರೈತರ ಹೋರಾಟದ ಸಭೆಯಲ್ಲಿ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಟಿ.ಡಿ.ರಾಜೇಗೌಡ, ಜೆಡಿಎಸ್ ಮುಖಂಡ ಸುಧಾಕರ್ ಶೆಟ್ಟಿ ನೀಡಿದ ಭರವಸೆಗಳು ಮಾತ್ರ ರೈತರಲ್ಲಿ ಆಶಾಭಾವನೆ ಮೂಡಿಸಿದೆ ಎಂದು ತಿಳಿಸಿದ್ದಾರೆ.