ಕರ್ತವ್ಯ ಲೋಪ "ಅರಣ್ಯಾಧಿಕಾರಿ ಅಮನತು'

klr
Published on

ಕೋಲಾರ: ಕರ್ತವ್ಯ ಲೋಪದಡಿ ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ ಕೆ.ಎನ್​.ರವಿಕೀರ್ತಿ ಅವರನ್ನು ಅಮಾನತುಗೊಳಿಸಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾ ನೇಗಿ ಅವರು ಆದೇಶಿಸಿದ್ದಾರೆ.

ವಲಯ ವ್ಯಾಪ್ತಿಯಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಅರಣ್ಯಾಧಿಕಾರಿ ಕೆ.ಎನ್​.ರವಿ ಕೀರ್ತಿ ಇಲಾಖೆಯ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ, ನ್ಯಾಯಾಲಯದಲ್ಲಿಯೂ ಸಹ ಯಾವುದೇ ಕ್ರಮವಹಿಸದೇ ಕರ್ತವ್ಯ ಲೋಪ ಎಸಗಿ ಒತ್ತುವರಿದಾರರಿಗೆ ಸಹಾಯ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಜಿಲ್ಲೆಯ ಶ್ರೀನಿವಾಸಪುರ ವಲಯದ ವ್ಯಾಪ್ತಿಯಲ್ಲಿ 4,060 ಎಕರೆ ಅರಣ್ಯ ಪ್ರದೇಶವನ್ನು 1910 ಜುಲೈ 26ರ ಪ್ರಕಾರ ರಾಜ್ಯ ಅರಣ್ಯ ಪ್ರದೇಶ ಎಂದು ಘೋಷಿಸಲಾಗಿದೆ. ಕರ್ನಾಟಕ ಅರಣ್ಯ ಪ್ರದೇಶ ಕಾಯ್ದೆ 1963ರ ಸೆಕ್ಷನ್​ 23ರ ಪ್ರಕಾರ ಅರಣ್ಯ ಪ್ರದೇಶವು ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದ್ದು, ಒತ್ತುವರಿ ತೆರವು ಮಾಡಿದ ಜಮೀನುನೊಳಗೆ ಒತ್ತುವರಿದಾರರು ಪ್ರವೇಶಿಸಲು ಅವಕಾಶ ನೀಡಲಾಗಿದೆ.

ಒತ್ತುವರಿಯಾಗಿದ್ದ ಅರಣ್ಯ ಜಮೀನನ್ನು 2023ನೇ ಸಾಲಿನಲ್ಲಿ ತೆರವುಗೊಳಿಸಲಾಗಿದೆ. ಸದರಿ ತೆರವು ಕಾರ್ಯಚರಣೆ ವಿರುದ್ಧ ಅಂದಾಜು 12 ರಿಟ್​ ಅರ್ಜಿಗಳು ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದು, ವಿಚಾರಣೆ ಹಂತದಲ್ಲಿ ಬಾಕಿ ಇರುತ್ತದೆ ಎಂದು ಬೆಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ವರದಿಯಲ್ಲಿ ತಿಳಿಸಲಾಗಿರುತ್ತದೆ.

ರಿಟ್​ ಅರ್ಜಿ 20247/2023ತೆ ಸಂಬಂಧಿಸದಂತೆ ಒತ್ತುವರಿದಾರ ಕೆ.ಎಂ.ನಾಗರಾಜು ಸುಮಾರು 6 ಎಕರೆ ಜಮೀನನ್ನು ಒತ್ತುವರಿ ಕಾರ್ಯಚರಣೆಯಿಂದ ತೆರವುಗೊಳಿಸಲಾಗಿರುತ್ತದೆ. ಆ ಜಾಗದಲ್ಲಿ ಕೆಎ್​ಡಿಎ್​ ಯೋಜನೆಯಡಿ ನೆಡುತೋಪುಗಳನ್ನು ಬೆಳೆಸಿದ್ದು, 1ನೇ ವರ್ಷದ ನಿರ್ವಹಣೆಯಲ್ಲಿರುತ್ತದೆ. ಇದಲ್ಲದೆ ತೆರವುಗೊಳಿಸಿದ ಪ್ರದೇಶದ ಗಡಿಯನ್ನು ಒತ್ತುವರಿಯನ್ನು ಸಂರಸುವ ಸಲುವಾಗಿ ಜಾನುವಾರು ನಿರೋಧ ಕಂದಕವನ್ನು ನಿರ್ಮಿಸಲಾಗಿದೆ.

ಆದರೆ ಒತ್ತುವರಿದಾರ ಕೆ.ಎಂ.ನಾಗರಾಜು ಹಾಗೂ ಇನ್ನಿತರರು ರಿಟ್​ ಅರ್ಜಿ ಸಂಬಂಧದ ಜಮೀನು ತಮ್ಮ ಪರ ಮಧ್ಯಂತರ ಆದೇಶ ಇದೆ ಎಂದು ಹೇಳಿ, ಏ.5ರಂದು 6&7 ಟ್ರಾ$್ಯಕ್ಟರ್​ಗಳನ್ನು ತೆಗೆದುಕೊಂಡು ಅರಣ್ಯ ಪ್ರದೇಶಕ್ಕೆ ಅನಧಿಕೃತವಾಗಿ ಪ್ರವೇಶ ಮಾಡಿ ಸುಮಾರು 100 ಎಕರೆಯಷ್ಟು ನೆಡುತೋಪು ನಿರ್ಮಾಣ ಮಾಡಿರುವುದನ್ನು ಹಾಳು ಮಾಡಿದ್ದಾರೆ. ಈಗಾಗಲೇ ತೆರವುಗೊಳಿಸಲಾಗಿರುವ ಪ್ರದಶವು ಇನ್ನು ಅರಣ್ಯ ಇಲಾಖೆಯ ವಶದಲ್ಲಿದೆ.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಗಿದ್ದು, ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ ಕೆ.ಎನ್​.ರವಿ ಕೀರ್ತಿ ಕರ್ತವ್ಯ ಪಾಲನೆಯಲ್ಲಿ ರ್ನಿಲಕ್ಷ$್ಯ ತೋರಿದ್ದಾರೆ. ಅಲ್ಲದೆ ಅಧಿಕಾರಿ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಾ ಆಧಾರಗಳಿದ್ದು, ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿದ್ದು, ಕನಾಟಕ ಅರಣ್ಯ ಸಂಹಿತೆ 1976ರಡಿ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಲರಾಗಿರುವುದು ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮಗಳು 2021 ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಆದ್ದರಿಂದ ಇಲಾಖೆಯ ವಿಚಾರಣೆ ಮತ್ತು ತನಿಖೆ ಬಾಕಿ ಇರಿಸಿ ಅಮಾನತ್ತಿನಲ್ಲಿಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net