ಆಂಗ್ಲ ಭಾಷಾ ಸಂವಹನ ಕಲೆ ಅತ್ಯಗತ್ಯ: ದಿಪೀಕಾ ಬಾಜಪೇಯಿ

06GDG03
Published on

ವಿಜಯವಾಣಿ ಸುದ್ದಿಜಾಲ ಗದಗ
ವಿದ್ಯಾಥಿರ್ಗಳಲ್ಲಿ ಉತ್ತಮ ಸಂವಹನ ಕಲೆಯನ್ನು ಬೆಳೆಸುವದು ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯವಾಗಿದೆ ಎಂದು ದಿಪೀಕಾ ಬಾಜಪೇಯಿ ಹೇಳಿದರು
ಜಿಪಂ ಸಭಾಂಗಣದಲ್ಲಿ ಭಾನುವಾರ ಜರುಗಿದ ಒಂದು ದಿನದ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಾತೃ ಭಾಷೆಯ ಜತೆಗೆ ಇಂಗ್ಲೀಷ್​ನಲ್ಲಿಯೂ ಸರಳವಾಗಿ ಮಾತನಾಡುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಕಚೇರಿ ವ್ಯವಹಾರ, ಸ್ಪರ್ದಾತ್ಮಕ ಪರೀೆ ಹಾಗೂ ಇನ್ನೀತರ ಸಂದರ್ಭಗಳಲ್ಲಿ ಇಂಗ್ಲೀಷ ಭಾಷೆ ಬಹಳಷ್ಟು ಅಶ್ಯವಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಕೃಷ್ಣಪ್ಪ ಪಿ. ಮಾತನಾಡಿ, ಉಪನ್ಯಾಸಕರು ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬೇಕು. ಮಾತೃ ಭಾಷೆ ನಮ್ಮ ಜೀವ ಭಾಷೆಯಾಗಿದೆ. ಮತ್ತು ಇಂಗೀಷ್​ ಭಾಷೆ ಅಭಿವ್ಯಕ್ತಿಯ ಜತೆಗೆ ಆಥಿರ್ಕ ಸಭಲತೆಯನ್ನು ನೀಡುವ ಭಾಷೆಯಾಗಿದೆ ಎಂದರು.
ಉಪನ್ಯಾಸಕಿ ಭಾಗ್ಯಮ್ಮ ಜಿ.ವಿ. ಮಾತನಾಡಿದರು. ಅಧ್ಯತೆಯನ್ನು ಬಸವರಾಜ ಗಿರಿತಿಮ್ಮಣ್ಣವರ ವಹಿಸಿದ್ದರು. ಉಪನ್ಯಾಸಕರ ವೇದಿಕೆಯ ಕಾರ್ಯದಶಿರ್ ರಮಾಕಾಂತ ದೊಡ್ಡಮನಿ ವೇದಿಕೆಯ ವಿವಿಧ ಕಾರ್ಯ&ಸಾಧನೆಗಳನ್ನು ವಿವರಿಸಿದರು.
2023ರ ಸಾಲಿನಲ್ಲಿ ದ್ವೀತಿಯ ಪಿ.ಯು.ಸಿ. ವಾಷಿರ್ಕ ಪರೀೆಯ ಇಂಗ್ಲೀಷ್​ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ವಿದ್ಯಾಥಿರ್ನಿಯರಾದ ಶಾಂಭವಿ, ಕಾವ್ಯಾ ಮುನೆನಕೊಪ್ಪ ಮತ್ತು ಶ್ನೇಹಾ ಹಬಿಬ ಅವರನ್ನು ನಗದು ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ವಿ. ವೈ. ತಿಮ್ಮಾಪುರ, ಎಸ್​.ಎಸ್​. ಕುಲಕಣಿರ್, ಎಸ್​.ಎಸ್​. ಕೊಟಗಿ, ಎಂ. ಆರ್​. ಕುಲಕಣಿರ್, ಸಂಗನಗೌಡ ಪಾಟೀಲ, ಪಿ. ವೈ, ಕರಮುಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net