

ಮೈಸೂರು: ಮಳಲವಡಿ ಗ್ರಾಮದಲ್ಲಿ ರಕ್ಷಿತಾರಣ್ಯ ಒತ್ತುವರಿ ಮಾಡಿದ ಆರೋಪದ ಮೇರೆಗೆ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಶನಿವಾರ 50 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಳಲವಡಿ ಗ್ರಾಮದ ಸರ್ವೇ ನಂ.31ರಲ್ಲಿ 33.02 ಎಕರೆ ಪ್ರದೇಶ ರಕ್ಷಿತಾರಣ್ಯವಿದೆ. ಈ ಪ್ರದೇಶವು ನಗರದ ಹಸರೀಕರಣ ವಲಯದ ವ್ಯಾಪ್ತಿಗೆ ಸೇರಿದೆ. 33.02 ಎಕರೆ ಜಾಗದಲ್ಲಿ ಟ್ರೀ ಪಾರ್ಕ್ ಅಭಿವೃದ್ದಿ ಪಡಿಸಲಾಗಿದೆ. ಜೂ.22 ರಂದು ಸ್ಥಳೀಯರಾದ ಸಿದ್ದಪ್ಪ, ರಾಜೀವ ಸೇರಿದಂತೆ 50 ಜರನು ಉದ್ಯಾನದ ತಡೆಗೋಡೆ ಒಡೆದು ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಅರಣ್ಯಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.