ನಿರ್ಬಂಧಿತ ಅರಣ್ಯ ಪ್ರದೇಶದಲ್ಲಿ ಎಣ್ಣೆ ಪಾರ್ಟಿ;ನಾಲ್ವರ ವಿರುದ್ಧ ಕೇಸ್…!

WhatsApp-Image-2020-07-24-at-1.42.05-AM.jpeg
Published on

ಬೆಳಗಾವಿ; ಖಾನಾಪೂರ ತಾಲೂಕಿನ ಜಾಂಬೋಟಿ ಬಳಿ ಬಟವಡೆ ಫಾಲ್ಸ್ ನಲ್ಲಿ ಹೆಸ್ಕಾಂ ವಾಹನ ಬಳಿ ಅಕ್ರಮ ಪ್ರವೇಶ ಮಾಡಿದ್ದಲ್ಲದೇ ಎಣ್ಣೆ ಪಾರ್ಟಿ ಮಾಡಿದ್ದ ನಾಲ್ಚರ ವಿರುದ್ದ ಅರಣ್ಯ ಇಲಾಖೆ ಕೇಸ್ ದಾಖಲಿಸಿದೆ. ನಿರ್ಬಂಧ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಕ ಅಧಿಕಾರಿಗಳು ಗ್ಯಾಸ್ ಬಳಿಸಿ ಎಣ್ಣೆ ಪಾರ್ಟಿ ಮಾಡಿದ್ದರು. ಈ ಕುರಿತು ಮಾಧ್ಯಮದಲ್ಲಿ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮ ಪ್ರವೇಶದಡಿ ಕೇಸ್ ದಾಖಲು ಮಾಡಿದ್ದಾರೆ. ವೈಲ್ಡ್ ಲೈಫ್ ಆಕ್ಟ್ 7ರ ಅಡಿಯಲ್ಲಿ ‌ಕೇಸ್ ದಾಖಲಿಸಿದ್ದು ಜಾಂಬೋಟಿ ವಲಯ ಅರಣ್ಯ ಕಚೇರಿಯಲ್ಲಿ ಕೇಸ್ ದಾಖಲಾಗಿದೆ. ಗ್ಯಾಸ್ ಸ್ಟೋ,ಅಡಿಗೆ ಸಾಮಗ್ರಿಗಳನ್ನು ಅರಣ್ಯಾಧಿಕಾರಿಗಳು ಸೀಜ್ ಮಾಡಿದ್ದಾರೆ.ಹೆಸ್ಕಾಂ ಅಧಿಕಾರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದು ಹೆಸ್ಕಾಂ ಇಲಾಖೆಗೆ ಸೇರಿದ್ದ ಬುಲೆರೋ ವಾಹನದಲ್ಲಿ ಬಂದಿದ್ದ ಸಿಬ್ಬಂದಿಗಳನ್ನು ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸದ್ಯ ವೈದ್ಯ ಶಿವಕುಮಾರ್ ಪುರಾಣಿಕಮಠ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net