ಸಸಿ ನೆಟ್ಟು ವನಮಹೋತ್ಸವ ಆಚರಣೆ

1001700545
ಹಗರೆ ಸಮೀಪದ ಅತಿಶಯ ಕ್ಷೇತ್ರ ಜೈನ ಗುತ್ತಿಯಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. ಸದಾಶಿವಯ್ಯ, ಹೊಲಭಗೆರೆ ಎ.ಎ.ಜಯಚಂದ್ರ ಇದ್ದರು.
Published on

ಹಗರೆ: ಪರಿಸರ ನಮ್ಮೆಲ್ಲರ ಹೊಣೆ. ಸಸಿ ನೆಟ್ಟು ಮರ ಬೆಳೆಸಿ, ನಾಡು ಉಳಿಸೋಣ ಎಂಬ ಧ್ಯೆಯ ವಾಕ್ಯದೊಂದಿಗೆ ಗಿಡಗಳನ್ನು ನೆಡುವ ಮೂಲಕ ಹಗರೆ ಪರಿಸರ ಪ್ರೇಮಿ ಸಾಲುಮರದ ಸದಾಶಿವಯ್ಯ ವನಮಹೋತ್ಸವ ಆಚರಿಸಿದರು.

ಹಗರೆ ಸಮೀಪದ ಶ್ರೀ ದಿಗಂಬರ ಜೈನ ಅತಿಶಯ ಕ್ಷೇತ್ರ ಜೈನರ ಗುತ್ತಿಯಲ್ಲಿ ಬುಧವಾರ ಹಗರೆ ಶ್ರೀ ದೇವೀರಮ್ಮ ವನಸಿರಿ ಟ್ರಸ್ಟ್ ಅಧ್ಯಕ್ಷರೂ ಆದ ಪರಿಸರ ಪ್ರೇಮಿ ಸಾಲುಮರದ ಸದಾಶಿವಯ್ಯ ಸಸಿಗಳನ್ನು ನೆಟ್ಟರು.

ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ತೋರಿಕೆಗಾಗಿ ಗಿಡ ನೆಡುವ ಹವ್ಯಾಸ ಅಭ್ಯಾಸವಾಗುತ್ತಿದೆ. ಗಿಡಗಳನ್ನು ನೆಟ್ಟು ಪೋಷಿಸಿ ಕಾಪಾಡಿಕೊಂಡಲ್ಲಿ ಮಾತ್ರ ನಮಗೆ ಪರಿಸರ ಉಳಿಯುತ್ತದೆ. ನಾನು ಬೆಳೆಸಿರುವ ಗಿಡಗಳು ಫಲ, ನೆರಳು ಕೊಡುತ್ತಿವೆ. ಇದಕ್ಕಿಂತ ಸಂತೋಷ ಇನ್ನೇನಿದೆ ಎಂದರು.

ಹೊಲಭಗೆರೆ ಸಮೀಪ ಎತ್ತಿನಹೊಳೆ ಯೋಜನೆಯಿಂದ ಮಣ್ಣು ಗುಡ್ಡೆಯಂತಾಗಿದ್ದ ನೂರಾರು ಎಕರೆ ಪ್ರದೇಶದಲ್ಲಿ ಗಿಡ ನೆಟ್ಟು, ಬೀಜ ಬಿತ್ತನೆ ಮಾಡಿ ಬೇಸಿಗೆಯಲ್ಲಿ ನೀರನ್ನು ಹಾಕಿದ್ದೆ. ಇಂದು ಈ ಪ್ರದೇಶ ಅರಣ್ಯದಂತೆ ಭಾಸವಾಗುತ್ತಿದೆ. ಇತ್ತೀಚೆಗೆ ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿಯುತ್ತಿರುವುದು ಹಾಗೂ ನಾಜೂಕಿನ ಜೀವನ ಶೈಲಿಗಾಗಿ ಮರಗಳ ನಾಶ, ಜನತ ಅತಿಯಾದ ಆಸೆ ಮುಂದಿನ ಪೀಳಿಗೆಗೆ ಮಾರಕವಾಗುವುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.

ಕಾಡುಬಾದಾಮಿ, ನಲ್ಲಿ, ನಿಂಬೆ, ನೆರಳೆ, ಶಿವನೆ, ವಂಗೆ, ಸಪೋಟೊ, ಸೀಬೆ ಗಿಡಗಳನ್ನು ಜೈನರಗುತ್ತಿ ಪ್ರದೇಶದ ಸುತ್ತ ನೆಟ್ಟು ನೀರುಣಿಸಿದರು. ಹೊಲಭಗೆರೆ ಗ್ರಾಮದ ಹಿರಿಯ ಪರಿಸರ ಪ್ರೇಮಿ ಎ.ಎ.ಜಿನಚಂದ್ರ, ಜೈನರಗುತ್ತಿಯ ವ್ಯವಸ್ಥಾಪಕ ಬಾಹುಬಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net