ರೋಟರಿ ವುಡ್ಸ್‌ನಿಂದ ವನ ಮಹೋತ್ಸವ

27adarshkdga6
Published on

ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ರೋಟರಿ ವುಡ್ಸ್ ಮತ್ತು ನೆಹರು ಯುವ ಕೇಂದ್ರದ ವತಿಯಿಂದ ಗುರುವಾರ ವನಮಹೋತ್ಸವ ಆಚರಿಸಲಾಯಿತು.


ತಿಮ್ಮಯ್ಯ ಸ್ಮಾರಕ ಭವನ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ರೋಟರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್, ಕಾರ್ಯದರ್ಶಿ ಕಿಗ್ಗಾಲು ಹರೀಶ್, ಸಹಾಯಕ ಗವರ್ನರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ಕ್ಲಬ್ ಖಜಾಂಜಿ ಧನಂಜಯ ಶಾಸ್ತ್ರಿ, ನೆಹರು ಯುವ ಕೇಂದ್ರದ ಸುಕುಮಾರ್, ದೀಪ್ತಿ, ರಂಜಿತ, ತಿಮ್ಮಯ್ಯ ಮ್ಯೂಸಿಯಂ ವ್ಯವಸ್ಥಾಪಕ ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ ಸೇರಿದಂತೆ ರೋಟರಿ ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net