ಅರಣ್ಯ ಅತಿಕ್ರಮಿಸಿ ಕಟ್ಟುತ್ತಿದ್ದ ಶೆಡ್‌ ತೆರವು

Shed-clearance
Published on

ಯಲ್ಲಾಪುರ: ತಾಲೂಕಿನ ಉಚಗೇರಿ ಗ್ರಾಮದಲ್ಲಿ ಚಿಪಗೇರಿಯಿಂದ ಕಂಚಿಕೊಪ್ಪಕ್ಕೆ ಹೋಗುವ ಮಾರ್ಗದ ಪಕ್ಕ ಅರಣ್ಯದಲ್ಲಿ ಹೊಸದಾಗಿ ಅತಿಕ್ರಮಣ ಮಾಡಿ ನಿರ್ಮಿಸಲಾಗುತ್ತಿದ್ದ ಶೆಡ್ ನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬುಧವಾರ ತೆರವುಗೊಳಿಸಿದರು. 

 ಉಚಗೇರಿಯ ಪ್ರೀತಿ ಸಿದ್ದಿ ಹಾಗೂ ಮಹಾಬಲೇಶ್ವರ ಸಿದ್ದಿ ಎಂಬವರು ಒಂದು ವಾರದಿಂದ ಹೊಸದಾಗಿ ಅತಿಕ್ರಮಣ ಮಾಡಿಕೊಂಡು ತಗಡಿನ ಶೆಡ್ ನಿರ್ಮಿಸುತ್ತಿದ್ದರು. ಮಾಹಿತಿಯ ಮೇರೆಗೆ ಬಂದು ಪರಿಶೀಲಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಶೆಡ್ ತೆರವಿಗೆ ಮುಂದಾದಾಗ ಪ್ರೀತಿ ಹಾಗೂ ಮಹಾಬಲೇಶ್ವರ ವಿರೋಧ ವ್ಯಕ್ತಪಡಿಸಿದರು.

 ಶೆಡ್ ತೆರವುಗೊಳಿಸುವುದಾದಲ್ಲಿ ನಮ್ಮನ್ನು ಕೊಂದು ತೆರವುಗೊಳಿಸಿ ಎಂದು ಪಟ್ಟು ಹಿಡಿದರು. ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ವಾದ ನಡೆಸಿದರು. ಅಧಿಕಾರಿಗಳು ಎಷ್ಟೇ ವಿನಂತಿಸಿದರೂ ತೆರವಿಗೆ ಅಡ್ಡಿಪಡಿಸಿದರು. ನಂತರ ಅಧಿಕಾರಿಗಳು ಪ್ರತಿಭಟನಾನಿರತರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಶೆಡ್ ತೆರವುಗೊಳಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net