ಬಂಡಲದಲ್ಲಿ ಅರಣ್ಯವಾಸಿಗಳ ಜಾಥಾ 15ರಂದು

Ravindranatha Naik
Published on

ಶಿರಸಿ: ಅರಣ್ಯವಾಸಿಗಳಿಗೆ ಕಾನೂನು ಮಾಹಿತಿ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಕಾನೂನು ಜಾಗೃತಾ ಜಾಥಾವನ್ನು ಮಾರ್ಚ 15ರಂದು ಮಧ್ನಾಹ್ನ 3 ಗಂಟೆಗೆ ತಾಲೂಕಿನ ಬಂಡಲ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಭಾಂಗಣದಲ್ಲಿ ಸಂಘಟಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಣ್ಯವಾಸಿಗಳ ಮಂಜೂರಿ ಸಂಬಂಧಪಟ್ಟಂತೆ ಮಂಜೂರಿ ಪ್ರಕ್ರಿಯೆಯಲ್ಲಿ ಕಾನೂನುನಾತ್ಮಕ ಸಮಸ್ಯೆಗಳನ್ನ ಎದುರಿಸುತ್ತಿರುವ ಹಿನ್ನಲೆಯಲ್ಲಿ ಮತ್ತು ಕಾನೂನು ಅಜ್ಞಾನದಿಂದ ಅರಣ್ಯವಾಸಿಗಳಿಗೆ ಭೂಮಿ ಹಕ್ಕಿನಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ರಾಜ್ಯಾದಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾನೂನು ಜಾಗೃತಿ ಜಾಥಾದಲ್ಲಿ ಕಾನೂನು ಅಂಶಕ್ಕೆ ಸಂಬಂಧಿಸಿ ಕರಪತ್ರ ವಿತರಿಸಲಾಗುವುದು. ಆಸಕ್ತ ಅರಣ್ಯವಾಸಿಗಳು ಆಗಮಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net