ಬೇಟೆಗಾರರ ಬೆನ್ನತ್ತಿದ ಅರಣ್ಯ ಇಲಾಖೆ ತಂಡ, ವಾಹನ ವಶ, ಆರೋಪಿಗಳು ಪರಾರಿ

hunt
Published on

ಕುಂದಾಪುರ: ಬೈಂದೂರು ತಾಲೂಕು ಆಲೂರು ಗ್ರಾಮ ಹರ್ಕೂರು ಬಳಿ ಗುರುವಾರ ಬೆಳಗಿನ ಜಾವ ಕಾಡು ಪ್ರಾಣಿಗಳ ಬೇಟೆಗೆ ಹೊಂಚು ಹಾಕಿ ಕುಳಿತಿದ್ದ ಬೇಟೆಗಾರರು ಅರಣ್ಯ ಇಲಾಖೆ ಅಧಿಕಾರಿಗಳು ಬರುವುದನ್ನು ಕಂಡು ಪರಾರಿಯಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಬೇಟೆಗಾರರು ತಾವು ಬಂದಿದ್ದ ಬೊಲೆರೋ ವಾಹನದಲ್ಲಿ ಪರಾರಿಯಾಗುವಾಗ ಕೆಂಚನೂರು ಬಳಿ ವಾಹನ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಬೇಟೆಗಾರರು ಓಡಿ ಹೋಗಿದ್ದಾರೆ.

15 ಕಿ.ಮೀ. ದೂರ ಬೆನ್ನತ್ತಿದ ಅರಣ್ಯ ಇಲಾಖೆ ಸಿಬ್ಬಂದಿ ಬೇಟೆಗಾರರ ವಾಹನ ವಶಕ್ಕೆ ಪಡೆದಿದ್ದಾರೆ. ನಾಲ್ವರು ಆರೋಪಿಗಳಿದ್ದ ಶಂಕೆಯಿದ್ದು, ಇಲಾಖಾಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ವಾಹನದಲ್ಲಿದ್ದ ಕಬ್ಬಿಣದ ರಾಡು, ಟಾರ್ಪಲ್, ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉಪವಲಯ ಅರಣ್ಯಾಧಿಕಾರಿ ದಿಲೀಪ್, ಅರಣ್ಯ ರಕ್ಷಕರಾದ ಮಂಜುನಾಥ ನಾಯ್ಕ, ಬಂಗಾರಪ್ಪ, ಜೀಪು ಚಾಲಕ ಅಶೋಕ್ ಕಾರ್ಯಾಚರಣೆ ನಡೆಸಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net