ಅರಣ್ಯ ಇಲಾಖೆ ದಿನಗೂಲಿ ನೌಕರರಿಂದ ಧರಣಿ

Forest Department daily wage workers stage protest
ಉದ್ಯಾನವನಗಳ ನಿರ್ವಹಣೆ ಕಾರ್ಯಕ್ಕೆ ಹೊರಗುತ್ತಿಗೆ ಟೆಂಡರ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಅರಣ್ಯ ಇಲಾಖೆ ದಿನಗೂಲಿ ನೌಕರರು ಆಲಮಟ್ಟಿಯಲ್ಲಿ ಧರಣಿ ನಡೆಸಿದರು. ಸಂಘದ ಜಿಲ್ಲಾಧ್ಯಕ್ಷ ವೀರು ಮಾದರ, ಭೀಮಶಿ ಲಮಾಣಿ, ಅವ್ವಣ್ಣ ವಾಲಿಕಾರ, ಕಾಶೀನಾಥ ಬಿಂಗಿ, ಶಂಕರ ಪಡಸಲಗಿ ಇತರರಿದ್ದರು.
Published on

ಆಲಮಟ್ಟಿ: ಆಲಮಟ್ಟಿಯ ವಿವಿಧ ಉದ್ಯಾನಗಳ ನಿರ್ವಹಣೆಗೆ ನೀಡಿರುವ ಹೊರಗುತ್ತಿಗೆ ಟೆಂಡರ್‌ನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ಪದಾಧಿಕಾರಿಗಳು ಅನಿರ್ದಿಷ್ಟಾವದಿ ಧರಣಿ ಆರಂಭಿಸಿದ್ದಾರೆ.

ಮೂಲ ಸಂತ್ರಸ್ತರಾಗಿರುವ ನಾವು ಕಳೆದ ಎರಡ್ಮೂರು ದಶಕಗಳಿಂದ ಉದ್ಯಾನಗಳಲ್ಲಿ ದಿನಗೂಲಿಗಳಾಗಿ ಕೆಲಸ ಮಾಡುತ್ತಿದ್ದೇವೆ. ಈಗ ಉದ್ಯಾನಗಳ ನಿರ್ವಹಣೆಯನ್ನು ಹೊರಗುತ್ತಿಗೆ ನೀಡುತ್ತಿರುವುದರಿಂದ ಗುತ್ತಿಗೆ ಪಡೆದವರು ನಮ್ಮನ್ನು ಕೆಲಸದಿಂದ ತೆಗೆಯಬಹುದು. ಇದನ್ನು ರದ್ದುಪಡಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.

ಅರವಿಂದ ಕುಲಕರ್ಣಿ ನೇತೃತ್ವದ ರೈತ ಸಂಘ ಧರಣಿಗೆ ಬೆಂಬಲ ಸೂಚಿಸಿತು. ದಿನಗೂಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರು ಮಾದರ, ಭೀಮಶಿ ಲಮಾಣಿ, ಅವ್ವಣ್ಣ ವಾಲಿಕಾರ, ಕಾಶೀನಾಥ ಬಿಂಗಿ, ಶಂಕರ ಪಡಸಲಗಿ, ಮಹೇಶ ತೆಲಗಿ, ಶಂಕರ ಅಂಕಲಗಿ, ಚನ್ನಪ್ಪ ಹುಲ್ಲೂರು, ಗೋವಿಂದ ಬಡ್ಡರ, ಅಲ್ಲಾಸಾಬ ಮೆಟಗುಡ್ಡ, ಬಸಪ್ಪ ತುಂಬರಮಟ್ಟಿ, ಪ್ರಕಾಶ ಮಾಲಗತ್ತಿ, ಭೀಮಶಿ ಮಾದರ, ರೇಣುಕಾ ಗೌಡರ, ರುಕ್ಮವ್ವ ಚವ್ಹಾಣ, ಶೋಭಾ ಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net