ಕಾಡಾನೆ ದಾಳಿ, ಬೆಳೆ ನಾಶ

1020
Published on

ಖಾನಾಪುರ: ತಾಲೂಕಿನ ಚುಂಚವಾಡ-ಕರೀಕಟ್ಟಿ ಗ್ರಾಮದ ಹೊರವಲಯದ ಜಮೀನಿಗೆ ನುಗ್ಗಿದ ಕಾಡಾನೆಯೊಂದು ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದ್ದು, ಮಂಗಳವಾರ ಬೆಳಕಿಗೆ ಬಂದಿದೆ.

ಚುಂಚವಾಡ ಗ್ರಾಮದ ರೈತರಾದ ಶರೀಫ್ ಹಲಸಗಿ, ಪ್ರವೀಣ ಮಾಂಡವಿ, ಗಜಾನನ ಪಾಟೀಲ, ಬಲರಾಮ ಪಾಟೀಲ ಹಾಗೂ ಕರೀಕಟ್ಟಿ ಗ್ರಾಮದ ರೈತರಾದ ಸುಭಾಷ ತಳವಾರ ಮತ್ತು ಗಣಪತಿ ತಳವಾರ ಹಾಗೂ ಇತರ ರೈತರ ಜಮೀನುಗಳಲ್ಲಿ ಬೆಳೆದಿದ್ದ ಕಬ್ಬು, ಭತ್ತ ತುಳಿದು ಹಾಳು ಮಾಡಿದೆ.

ಆನೆ ಹಾವಳಿಯಿಂದ ಆತಂಕ ಶುರುವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net