ಪೃಕೃತಿಯ ಮಡಿಲು ಬಿಟ್ಟು ಮಾನವ ಜೀವಿ ಸಮೂಹ ಬದುಕಲು ಸಾದ್ಯವೇ ಇಲ್ಲ: ನವೀನ ನಾಯ್ಕ

08GDG06
Published on

ಗದಗ: ಪೃಕೃತಿಯ ಮಡಿಲು ಬಿಟ್ಟು ಮಾನವ ಜೀವಿ ಸಮೂಹ ಬದುಕಲು ಸಾದ್ಯವೇ ಇಲ್ಲಾ, ಇಂತಹ ಪರಿಸರ ಉಳಿಸಿ ಬೆಳೆಸಿ ಹಸಿರು ಸಮುದಾಯ ಸೃಷ್ಠಿಸುವ ಸಾಮಾಜಿಕ ಹೊಣೆಗಾರಿಕೆ ಎಲ್ಲರ ಮೇಲಿದೆ, ಹಸಿರು ಸಮುದಾಯ ನಿರ್ಮಿಸುವ ಸಂಕಲ್ಪದಿAದಾಗಿ ಪ್ರಸಕ್ತ ವರ್ಷದಲ್ಲಿ ೭೦ ಸಾವಿರ ಸಸಿಗಳನ್ನು ವಿತರಿಸುವ ಗುರಿ ನಿಗದಿ ಮಾಡಲಾಗಿದೆ ಎಂದು ಗದಗ ಸಾಮಾಜಿಕ ಅರಣ್ಯ ವಲಯ ಅಧಿಕಾರಿ ನವೀನ ನಾಯ್ಕ ಹೇಳಿದರು.

ಗದಗ ತಾಲೂಕಿನಾದ್ಯಂತ ಹಬ್ಬಿರುವ ಸಾಮಾಜಿಕ ವಲಯದ ವ್ಯಾಪ್ತಿಯಲ್ಲಿ ಹಸಿರು ಸಮುದಾಯ ಸೃಷ್ಠಿಸುವ ಪ್ರಮುಖ ಉದ್ದೇಶದಿಂದಾಗಿಯೇ ಆರ್.ಎಸ್.ಪಿ.ಡಿ, ಆರ್.ಕೆ.ವಿ.ವ್ಯಾಯ್ ಹಾಗೂ ನರೇಗಾ ಯೋಜನೆಗಳ ಅಡಿಯಲ್ಲಿ ರಿಯಾಯತಿ ದರದಲ್ಲಿ ಸಸಿಗಳನ್ನು ವಿತರಿಸಲಾಗುವದು. ಮಾರುಕಟ್ಟೆಯಲ್ಲಿ ಒಂದು ವರ್ಷದ ಸಸಿಗೆ ೪೦ ರೂಗಳಿದ್ದರೇ ೬ ರೂಗಳಲ್ಲಿ ಆ ಸಸಿಗಳನ್ನು ಬಿಂಕದಕಟ್ಟಿಯ ಹೈಟೆಕ್ ನರ್ಸಿಂಗ್ ಕೇಂದ್ರ ವಿತರಿಸುವ ಮೂಲಕ ಸಸಿಗಳನ್ನು ನೆಡಲು ಪ್ರೇರಣೆ ನೀಡಲಿದೆ. ಬಿಂಕದಕಟ್ಟಿ ಹೈಟೆಕ್ ನರ್ಸಿಂಗ್ ಕೇಂದ್ರದಲ್ಲಿ ನುಗ್ಗಿ, ಸಾಗವಾನಿ, ಹುಣಸಿ, ಮಹಾಗಣಿ, ನೀರಲ್, ನೆಲ್ಲಿ, ಬಿದಿರು, ಬೇವು, ಹೆಬ್ಬೇವು, ಶ್ರೀಗಂಧ, ಕರಿಬೇವು, ಚತುರ್ಮುಖ, ಸಂಪಿಗೆ, ಬಂಗಾಳಿ, ಗಜಗ, ತಬುಬಿಯ, ಶಿವನಿ, ಹೊಳೆಮತ್ತಿ, ಚರಿ, ಬಳುಲ, ಹೊಂಗೆ, ಪೇರಲ್, ಮಾವು, ಲಿಂಬಿ, ಸೀತಾಫಲ್, ಅರಳಿ, ಬಸರಿ, ಬಸವನಪಾದ, ಆಕಾಶ ಮಲ್ಲಿಗೆ, ಜವಾನಿಕಾ, ಕಾಡು ಬದಾಮಿ, ತಪಸ್, ಅತ್ತಿ, ಚಳ್ಳ, ಗುಲಮೊಹರ್, ಸಿರಸಲ್, ಸಿಹಿ ಹುಣಸಿ, ರೇನ ಟ್ರೀ ಸೇರಿದಂತೆ ವಿವಿಧ ತಳಿಯ ಸಸಿಗಳು ಲಭ್ಯ ಇವೆ, ಆಸಕ್ತ ರೈತರು, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು ಈ ಸಸಿಗಳನ್ನು ನೆಡುವ ಮೂಲಕ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿ ಪರಿಸರ ಸಂರಕ್ಷಣೆ ಮೆರೆದು ಸಾಮಾಜಿಕ ಹೊಣೆಗಾರಿಕೆ ಮೆರೆಯಬೇಕಿದೆ. ಬಿಸಿಲಿನ ಬೇಗೆ ತಡೆಯಲು, ತಂಪಾದ ವಾತವಾರಣ ನಿರ್ಮಿಸಿ ಮಳೆಗೆ ಅನುವು ಮಾಡಿಕೊಡುವ ಪರಿಸರ ಸೃಷ್ಠಿಗೆ ಸಸಿಗಳ ಬೆಳವಣಿಗೆ ಅತಿ ಮುಖ್ಯವಾಗಿರುವ ಪ್ರಮುಖ ಉದ್ದೇಶದಿಂದಾಗಿಯೇ ಕಳೆದ ವರ್ಷ ೨೦೨೨-೨೩ ರಲ್ಲಿ ೪೮ ಸಾವಿರ ಸಸಿಗಳನ್ನು ವಿತರಿಸಲಾಗಿದೆ, ಪ್ರಸಕ್ತ ವರ್ಷದಲ್ಲಿ ೭೦ ಸಾವಿರ ಸಸಿಗಳನ್ನು ವಿತರಿಸುವ ಗುರಿ ನಿಗದಿ ಮಾಡಲಾಗಿದೆ, ಈ ಯೋಜನೆ ಅಡಿಯಲ್ಲಿ ರೈತರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ, ರೈತರು ತಮ್ಮ ಉದ್ಯೋಗ ಗುರುತಿನ ಚೀಟಿಯ ಮೂಲಕ ಉಚಿತ ಪಡೆಯಬಹುದು ಎನ್ನುತ್ತಾರೆ ಗದಗ ಸಾಮಾಜಿಕ ವಲಯದ ಅರಣ್ಯ ಅಧಿಕಾರಿ ನವೀನ ನಾಯ್ಕ.

ವಿವಿಧ ಸಸಿ ತಳಿಗಳಿಗೆ ಹೆಸರುವಾಸಿಯಾಗಿರುವ ಬಿಂಕದಕಟ್ಟಿ ಹೈಟೆಕ್ ನರ್ಸರಿ ಕೇಂದ್ರದಲ್ಲಿ ಎಲ್ಲ ರೀತಿಯ ಸಸಿಗಳು ಲಭ್ಯವಿವೆ. ಬೇಸಿಗೆ ಕಾಲದಲ್ಲಿ ನಮಗೆ ಬೇಕಾದ ಬೀಜಗಳನ್ನು ಗದಗ ಜಿಲ್ಲೆಯಾದ್ಯಂತ ಸಂಚರಿಸಿ ಶೇಖರಣೆ ಮಾಡುತ್ತೇವೆ, ಸಿಗಲಾರದ ಬೀಜಗಳನ್ನು ಇತರೆ ಜಿಲ್ಲೆಗಳಿಂದ ತರಿಸುತ್ತೇವೆ, ಶ್ರೀಗಂಧ, ಕಬೂಬಿಯ, ನುಗ್ಗಿ, ಹೆಬ್ಬೇವು, ಬಿದರ ಬೀಜಗಳನ್ನು ಮೈಸೂರು, ದಾವಣಗೇರಿ ಮತ್ತೇ ಶಿವಮೊಗ್ಗದಿಂದ ತರಿಸುತ್ತೇವೆ, ಬೀಜಗಳಿಂದ ಸಸಿ ಬೆಳೆದು ಒಂದು ವರ್ಷ ಆದ ಬಳಿಕ ಪೂರೈಕೆ ಮಾಡುತ್ತೇವೆ ಎನ್ನುತ್ತಾರೆ ಉಪ ವಲಯ ಅರಣ್ಯಾಧಿಕಾರಿ ಎಸ್.ಎಮ್.ಲಮಾಣಿ,

ವಿವಿಧ ಮಾದರಿ ಸಸಿ ತಳಿಗಳ ಬೆಳವಣಿಗೆ ಮತ್ತು ಸಂಗ್ರಹಕ್ಕೆ ಕಾರಣವಾದ ಬಿಂಟದಕಟ್ಟಿ ಹೈಟೆಕ್ ನರ್ಸರಿ ಕೇಂದ್ರದಲ್ಲಿ ಎಲ್ಲ ನಮೂನೆಯ ಸಸಿಗಳು ಲಭ್ಯ ಇವೆ, ರೈತರು, ಪರಿಸರ ಪ್ರೇಮಿಗಳು, ಶಾಲಾ ಕಾಲೇಜುಗಳು ಸಂಘ ಸಂಸ್ಥೆಗಳು ಸಸಿಗಳನ್ನು ನೆಡುವ ಮೂಲಕ ಹಸಿರು ಪರಿಸರ ಸೃಷ್ಠಿಸಿ ಪ್ರಕೃತಿಗೆ ಕೊಡುಗೆ ನೀಡಿ ಸಾಮಾಜಿಕ ಹೊಣೆಗಾರಿಕೆ ಮೆರೆಯಬೇಕಿದೆ, ಆ ಹಿನ್ನಲೆಯಲ್ಲಿ ಸಸಿ ಬೆಳವಣಿಗೆಗೆ ಮಳೆಗಾಲ ಪೂರಕವಾಗಿದೆ, ತಕ್ಷಣವೇ ಭೇಟಿ ನೀಡಿ ಅಗತ್ಯ ಸಸಿ ಪಡೆದು ನೆಡುವ ಮೂಲಕ ಪರಿಸರ ಪೇಮ ಮೆರೆಯಲು ಬಿಂಕದಕಟ್ಟಿ ಹೈಟೆಕ್ ನರ್ಸರಿ ಕೇಂದ್ರ ಕೈ ಬಿಸಿ ಕರೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net