ಅಕ್ರಮ ಬೀಟಿ ಮರ ಸಾಗಾಟ ಪ್ರಕರಣ ಪತ್ತೆ

27mdk07
Published on

ಮಡಿಕೇರಿ:

ಗೊಬ್ಬರ ಚೀಲ ಮುಚ್ಚಿಕೊಂಡು ಅಕ್ರಮವಾಗಿ ಬೀಟಿ ಮರ ಸಾಗಿಸುತ್ತಿದ್ದ ಪ್ರಕರಣವನ್ನು ಮಡಿಕೇರಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ಮರಗೋಡು ಸಮೀಪ ಶುಕ್ರವಾರ ತಡ ರಾತ್ರಿ ಪತ್ತೆ ಹಚ್ಚಿದ್ದಾರೆ. ಸುಮಾರು ೨ ಲಕ್ಷ ರೂ. ಮೌಲ್ಯದ ಮರ, ಲಾರಿ ಸೇರಿ ಒಟ್ಟು ೨೨ ಲಕ್ಷದ ರೂ. ಮೌಲ್ಯದ ಮಾಲು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ. ಈ ಸಂದರ್ಭ ಲಾರಿ ಚಾಲಕ ಮತ್ತು ಆರೋಪಿಗಳು ಪರಾರಿ ಆಗಿದ್ದಾರೆ.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಿಷಿನ್ ಭಾಷಾ, ವಲಯ ಅರಣ್ಯಾಧಿಕಾರಿ ಹನುಮಂತ ರಾಜು, ಮೂರ್ನಾಡು ಉಪ ವಲಯದ ಉಪವಲಯ ಅರಣ್ಯಾಧಿಕಾರಿ ಬಿ.ಹೆಚ್. ಸಚಿನ್ ಸೇರಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net