ಸಾವಿರಕಂಬದ ಬಸದಿಗೆ ವಿದೇಶಿಗರ ಭೇಟಿ

basadi
ಮೂಡುಬಿದಿರೆ ಸಾವಿರ ಕಂಬದ ಬಸದಿಗೆ ವಿದೇಶಿಗರು ಭೇಟಿ ನೀಡಿದರು. ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಇಲ್ಲಿನ ಸಾವಿರ ಕಂಬದ ಬಸದಿಗೆ 120 ಮಂದಿ ವಿದೇಶಿಗರು ಭೇಟಿ ನೀಡಿ, ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ಜತೆ ಕ್ಷೇತ್ರದ ಕುರಿತು ಸಮಾಲೋಚನೆ ನಡೆಸಿದರು.

ಯುಎಸ್‌ಎ, ನೆದರ್‌ಲೆಂಡ್, ಯುಕ್ರೇನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್, ಫಿಲಿಫೈನ್ಸ್, ಯುಕೆಯಿಂದ ಮಂಗಳವಾರ ಬಂದ ವಿದೇಶಿಗರು ಬಸದಿಯ ಕಂಬಗಳ ಕೆತ್ತನೆ ಸೂಕ್ಷ್ಮತೆ ಕುರಿತು ಆಶ್ಚರ್ಯ ವ್ಯಕ್ತಪಡಿಸಿದರು.

ಮಂಗಳೂರು ಮೂಲದ ಕ್ಯಾಲಿಫೋರ್ನಿಯ ಉದ್ಯೋಗಿ ಸಚಿನ್ ಪಡಿವಾಳ್ ಅವರನ್ನು ಭಟ್ಟಾರಕ ಸ್ವಾಮೀಜಿ ಸನ್ಮಾನಿಸಿದರು. ಮಂಗಳೂರಿನ ಟ್ರಾವೆಲ್ ಗೈಡ್ ರೋಹನ್, ರೋಷನ್, ಶ್ರೀಕಾಂತ್ ಮೊದಲಾದವರು ಉಪಸ್ಥಿತರಿದ್ದು, ಬಸದಿ ಬಾಗಿಲು, ಭೈರಾದೇವಿ ಮಂಟಪ ಕೆಳ ಅಂತಸ್ತು ಪಟ್ಟಿಯ ವಿಶ್ವದ ವೈವಿಧ್ಯಮಯ ಚಿತ್ರಗಳ ವಿವರ ನೀಡಿದರು.

ಕಾರ್ಕಳ, ಸೋನ್ಸ್ ಫಾರ್ಮ್‌ಗೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಈ ಸೀಸನಿನ ಕೊನೆಯ ಹಡಗು ಆಗಿದ್ದು, ಅಕ್ಟೋಬರ್ ಕೊನೆಗೆ ಪ್ರವಾಸಿಗರು ಮತ್ತೆ ಆಗಮಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net