

ಗೋಕರ್ಣ: ಇಲ್ಲಿನ ಕುಡ್ಲೆ ಸಮುದ್ರದಲ್ಲಿ ಗುರುವಾರ ಮಧ್ಯಾಹ್ನ ಈಜಲು ತೆರಳಿದ್ದ ಅಝುರ್ಬೈಜಾನ್ ದೇಶದ ತತನಾ ಬಾಲಸ್ಕಾವ್ ಎನ್ನುವ 73 ವರ್ಷದ ಮಹಿಳೆ ಅಪಾಯಕ್ಕೆ ಸಿಲುಕಿ ಸಹಾಯಕ್ಕೆ ಕೂಗಿಕೊಂಡಿದ್ದಳು. ಇದನ್ನು ಗಮನಿಸಿದ ಬೀಚ್ನಲ್ಲಿ ಕರ್ತವ್ಯದಲ್ಲಿದ್ದ ಲೈಫ್ಗಾರ್ಡ್ಗಳಾದ ನಾಗೇಂದ್ರ ಎಸ್. ಕುರ್ಲೆ, ಪ್ರದೀಪ ಬಿ. ಅಂಬಿಗ, ಶೇಖರ ಹರಿಕಂತ್ರ ಹಾಗೂ ಪ್ರವಾಸಿ ಬೋಟ್ ನಿರ್ವಹಿಸುತ್ತಿರುವ ಮೈಸ್ಟಿಕ್ ಸಿಬ್ಬಂದಿ ಜೆಟ್ಸ್ಕೀ ಮೂಲಕ ತಕ್ಷಣ ಸಮುದ್ರಕ್ಕೆ ತೆರಳಿ ವಿದೇಶಿ ಮಹಿಳೆಯನ್ನು ರಕ್ಷಿಸಿ ಮೇಲಕ್ಕೆ ತಂದರು.