

ಬೆಳಗಾವಿ: ಜೈನಕವಿಗಳು, ವಚನಕಾರರು ಹಾಗೂ ಹೊಸಗನ್ನಡ ಕವಿಗಳು ಕನ್ನಡ ಪರಂಪರೆಯನ್ನು ಸಾಹಿತ್ಯದ ಮೂಲಕ ಉಳಿಸಿಕೊಂಡು ಬಂದಿದ್ದಾರೆ ಎಂದು ಲಿಂಗರಾಜ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ ಹೇಳಿದರು.
ಭರತೇಶ ಶಿಣ ಸಂಸ್ಥೆಯ ಜೆಜಿಎನ್ಡಿ ಭರತೇಶ ಪದವಿ ಮಹಾವಿದ್ಯಾಲಯದ ಕನ್ನಡೋತ್ಸವ ಕನ್ನಡಹಬ್ಬದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಭರತೇಶ ಶಿಣ ಸಂಸ್ಥೆ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾತೃಭಾಷೆ ಮೂಲಕ ಉನ್ನತಿ ಸಾಧಿಸಲು ಸಾಧ್ಯವಿದೆ ಎಂದರು.
ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯ ಹಿರಾಚಂದ ಕಲಮನಿ ಮಾತನಾಡಿದರು. ಜೆಜಿಎನ್ಡಿ ಪದವಿ ಕಾಲೇಜಿನ ಪ್ರಾಚಾಯೆರ್ ನೀತಾ ಗಂಗಾರೆಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಕನ್ನಡೋತ್ಸವದ ಆಯೋಜಕಿ ಸುಪರ್ಣಾ ಲಗಮಣ್ಣವರ ಪರಿಚಯಿಸಿದರು. ಬಾಲೇಷ ಮಣ್ಣಿಕೇರಿ ಹಾಗೂ ಬಿ.ಎ ಅಂತಿಮ ವಿದ್ಯಾರ್ಥಿ ವಿಶ್ವನಾಥ ವಿಜಾಪುರ ನಿರೂಪಿಸಿದರು. ಕಾಶಿನಾಥ ಶೃಂಗೇರಿ ಕನ್ನಡೋತ್ಸವದ ವರದಿ ಓದಿದರು. ನಾಗರಾಜ ಬಾಗೇವಾಡಿ ವಂದಿಸಿದರು. ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಸಂಸತಿ ಬಿಂಬಿಸುವ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.