ವಿದೇಶದಲ್ಲಿ ಉದ್ಯೋಗ ಆಮಿಷ 36.34 ಲ.ರೂ. ವಂಚನೆ

Fruad
Published on

ಮಂಗಳೂರು: ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ 36.34 ಲ.ರೂ. ಪಡೆದು ವಂಚಿಸಿರುವ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವ್ಯಕ್ತಿಯೋರ್ವರು ಉದ್ಯೋಗಕ್ಕಾಗಿ ಐ್ಞಛಿಛಿ.್ಚಟಞ ಎಂಬ ವೆಬ್‌ಸೈಟ್ ನಲ್ಲಿ ತಮ್ಮ ಬಯೋಡೇಟಾ ಅಪ್‌ಲೋಡ್ ಮಾಡಿದ್ದರು. ಫೆ.16ರಂದು ಯಾರೋ ಅಪರಿಚಿತರು ಆಸ್ಟ್ರೇಲಿಯಾದಲ್ಲಿರುವ ಈಚ್ಟ್ಟಛ್ಝ್ಝಿ ಔಛಿ ಇಟ್ಞ್ಛಛ್ಚಿಠಿಜಿಟ್ಞಛ್ಟಿ ್ಚಟ. ಕಂಪೆನಿ ಹೆಸರಿನಲ್ಲಿ ಇ-ಮೇಲ್ ಮೂಲಕ ಜಾಬ್ ಅಪ್ಲಿಕೇಷನ್ ಕಳುಹಿಸಿದ್ದರು. ನೀವು ಉದ್ಯೋಗಕ್ಕೆ ಆಯ್ಕೆಯಾಗಿದ್ದು ಶಿಕ್ಷಣದ ದಾಖಲಾತಿ, ಪಾಸ್‌ಪೋರ್ಟ್, ಪೊಟೋ, ಜಾಬ್ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ ಕಳುಹಿಸುವಂತೆ ತಿಳಿಸಿದರು. ಇದನ್ನು ಸತ್ಯವೆಂದು ನಂಬಿದ ದೂರುದಾರರು ತಮ್ಮ ಬಯೋಡೇಟಾವನ್ನು ಇ-ಮೇಲ್ ಮಾಡಿದ್ದರು.

ಆರೋಪಿಗಳು ಅವರಿಗೆ ಆಫರ್ ಲೆಟರ್, ಒಪ್ಪಂದ ಲೆಟರ್, ನೇಮಕಾತಿ ಲೆಟರ್, ವೀಸಾ ಕನ್‌ಫರ್ಮೇಷನ್ ಲೆಟರ್ ಕಳುಹಿಸಿ ಮೊಬೈಲ್‌ಗೆ ಕರೆ ಮಾಡಿ ವೀಸಾ ಕನ್ಫರ್ಮೇಶನ್ ಫಾರ್ಮ್ ಶುಲ್ಕ, ವೆರಿಫಿಕೇಶನ್ ಶುಲ್ಕ ಮತ್ತು ಇತರ ಶುಲ್ಕ ಪಾವತಿಸಬೇಕೆಂದು ತಿಳಿಸಿದರು. ಅನಂತರ ಎ.4ರಿಂದ ಮೇ 6ರವರೆಗೆ ಹಂತ ಹಂತವಾಗಿ 36,34,000 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net