

ವಿಜಯವಾಣಿ ಸುದ್ದಿಜಾಲ ಧಾರವಾಡ
ಯುಜಿಸಿ ಮಾಜಿ ಅಧ್ಯ ಸುಖದೇವ ಥೋರಟ್ ಸಮಿತಿಯ ಮಧ್ಯಂತರ ವರದಿ ಆಧರಿಸಿ ಬಿಜೆಪಿ ಸರ್ಕಾರ ಜಾರಿಗೆ ತಂದ 4 ವರ್ಷದ ಪದವಿ ಶಿಣವನ್ನು ರದ್ದುಪಡಿಸಿ 3 ವರ್ಷಕ್ಕೆ ಸಿಮೀತಗೊಳಿಸಿ ಹೊರಡಿಸಿದ ಆದೇಶವನ್ನು ತಣ ಹಿಂಪಡೆಯಲು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರದ ಈ ನಿರ್ಣಯ ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಯುಜಿಸಿ ಮಾಜಿ ಅಧ್ಯ ಥೋರಟ್ ಸಮಿತಿ ವರದಿಯನ್ನು ಬಹಿರಂಗಪಡಿಸದೆ ಮತ್ತು ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳ ಕುಲಪತಿಗಳ ಜತೆಗೆ ಚಚಿರ್ಸದೆ ಏಕಾಏಕಿಯಾಗಿ ನಿರ್ಣಯಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ.
ರಾಷ್ಟ್ರೀಯ ಶಿಣ ನೀತಿ 2020ರಂತೆ 4 ವರ್ಷದ ಪದವಿ ಶಿಣ ಪಡೆದ ವಿದ್ಯಾಥಿರ್ಗಳು ನೇರವಾಗಿ ಪಿಎಚ್.ಡಿಗೆ ಪ್ರವೇಶ ಪಡೆಯಲು ಮತ್ತು ಸೆಟ್, ನೆಟ್ ಪರೀೆ ಬರೆಯಲು ಯುಜಿಸಿ ಅವಕಾಶ ಕಲ್ಪಿಸಿದೆ. ಈ ವಿದ್ಯಾಥಿರ್ಗಳು ನೇರವಾಗಿ ಹೊರ ದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡಲೂ ಅವಕಾಶವಿದೆ. ಈ ರೀತಿ ಅನುಕೂಲ ಇದ್ದಾಗ್ಯೂ ಇಂದಿನ ಸರ್ಕಾರ 4 ವರ್ಷದ ಪದವಿ ಕೋರ್ಸನ್ನು ರದ್ದು ಮಾಡಿದ್ದು ದುರದೃಷ್ಟಕರ ಸಂಗತಿ. ಸರ್ಕಾರ ವಿದ್ಯಾಥಿರ್ಗಳ ಹಿತದೃಷ್ಟಿಯಿಂದ 4 ವರ್ಷದ ಪದವಿ ಕೋರ್ಸ ರದ್ದು ಮಾಡಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಸಂಕನೂರ ಆಗ್ರಹಿಸಿದ್ದಾರೆ.