ಪರಿಸರ ಉಳಿಸುವಂತೆ ಒತ್ತಾಯ

12 ckm 6
ಚಿಕ್ಕಮಗಳೂರು ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ಪ್ರಗತಿಪರ ಸಂಘಟನೆಯ ಜಿಲ್ಲಾ ಶಾಖೆ ಕಾರ್ಯಕರ್ತರು ಸಂವಿಧಾನ ಉಳಿಸಿ ಪರಿಸರ ಸಂರಕ್ಷಿಸಿ, ಬಹುರಾಷ್ಟಿçÃಯ ಕಂಪನಿಗಳ ಲೂಟಿಕೋರ ನೀತಿಯನ್ನು ಕೈಬಿಡಿ ಎಂದು ಒತ್ತಾಯಿಸಿದರು. ಉಮೇಶ್ ಕುಮಾರ್, ಸುರೇಶ್, ಪೂರ್ಣೇಶ್, ಹಂಪಯ್ಯ, ಪ್ರೇಮ್ ಕುಮಾರ್, ನಿಂಗಯ್ಯ, ಸುರೇಶ್ ಗಾಳಿಪೇಟೆ, ಸುಂದ್ರೇಶ್, ಗುರುವಯ್ಯ, ಪದ್ಮನಾಭ ಮತ್ತಿತರರು ವಹಿಸಿದ್ದರು.
Published on

ಚಿಕ್ಕಮಗಳೂರು: ಸಂವಿಧಾನ ಉಳಿಸಿ ಪರಿಸರ ಸಂರಕ್ಷಿಸಿ, ಬಹುರಾಷ್ಟಿçÃಯ ಕಂಪನಿಗಳ ಲೂಟಿಕೋರ ನೀತಿಯನ್ನು ಕೈಬಿಡಿ ಎಂದು ಒತ್ತಾಯಿಸಿ ಕರ್ನಾಟಕ ಪ್ರಗತಿಪರ ಸಂಘಟನೆಯ ಜಿಲ್ಲಾ ಶಾಖೆ ಕಾರ್ಯಕರ್ತರು ಸೋಮವಾರ ಆಜಾದ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಭಾರೀ ಬಂಡವಾಳಶಾಹಿಗಳಿAದ ಹಾಗೂ ಭೂಗಳ್ಳರಿಂದ ಪ್ರಕೃತಿಯನ್ನು ರಕ್ಷಿಸಿ, ಪರಿಸರ ತಜ್ಞ ಡಾ. ಮಾಧವ್ ಗಾಡ್ಗೀಳ್ ಅವರ ವೈಜ್ಞಾನಿಕ ವರದಿಯನ್ನು ಯತಾವತ್ತಾಗಿ ಜಾರಿ ಮಾಡಿ ಕೊಡಗು, ಜಿಲ್ಲೆಯ ಮಲೆನಾಡು ಭಾಗದಲ್ಲಿ, ಕೇರಳದ ವಯನಾಡಿನಲ್ಲಿ ಭೂಕುಸಿತದ ದುರಂತಗಳು ಸಂಭವಿಸದAತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.
ಜೀವನೋಪಾಯಕ್ಕಾಗಿ ಸಾಗುವಳಿ ಮಾಡಿರುವ ಬಡ ಸಾಗುವಳಿದಾರರನ್ನು ಹೊರತುಪಡಿಸಿ, ಭಾರೀ ಭೂಮಾಲಿಕರ ಒತ್ತುವರಿದಾರರನ್ನು ತೆರವುಗೊಳಿಸಬೇಕು. ಅರಣ್ಯ ಮತ್ತು ಕಂದಾಯ ಭೂಮಿ ಜಂಟಿ ಸರ್ವೆ ನಡೆಸಿ ಗಡಿ ಗುರುತಿಸಿ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಗಿರಿ ಪ್ರದೇಶ ಮತ್ತು ಮುಳ್ಳಯ್ಯನಗಿರಿ ಸುತ್ತಮುತ್ತ ಹೋಂಸ್ಟೇ, ರೆಸಾರ್ಟ್, ಕಲ್ಲುಗಣಿಗಾರಿಕೆ, ಭಾರಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಬಾರದು. ಈಗಾಗಲೇ ನೀಡಿರುವ ಅನುಮತಿಯನ್ನು ಕೂಡಲೇ ರದ್ದುಪಡಿಸಬೇಕು ಹಾಗೂ ಯಾವುದೇ ಪರಿಸರ ವಿರೋಧಿ ಚಟುವಟಿಕೆಗಳಿಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಪ್ರಗತಿಪರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಉಮೇಶ್ ಕುಮಾರ್, ಸದಸ್ಯರಾದ ಸುರೇಶ್, ಪೂರ್ಣೇಶ್, ಹಂಪಯ್ಯ, ಪ್ರೇಮ್ ಕುಮಾರ್, ನಿಂಗಯ್ಯ, ಸುರೇಶ್ ಗಾಳಿಪೇಟೆ, ಸುಂದ್ರೇಶ್, ಗುರುವಯ್ಯ, ಪದ್ಮನಾಭ ಮತ್ತಿತರರು ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net