ಒಣಗಿದ ಮರ ತೆರವುಗೊಳಿಸಲು ಒತ್ತಾಯ

22sunti03
ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಭಾರೀ ಗಾತ್ರದ ಒಣಗಿದ ಮರ.
Published on

ಸುಂಟಿಕೊಪ್ಪ: ಕೊಡಗರಹಳ್ಳಿ, ಕಂಬಿಬಾಣೆ ಹಾಗೂ ಚಿಕ್ಲಿಹೊಳೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಖಾಸಗಿ ತೋಟವೊಂದರ ಭಾರೀ ಗಾತ್ರದ ಮರವೊಂದು ಒಣಗಿ ನಿಂತಿದ್ದು ಅಪಾಯದ ಅಂಚಿನಲ್ಲಿದ್ದು, ಸಂಬಂಧಪಟ್ಟ ಇಲಾಖೆಯವರು ಮರ ತೆರವುಗೊಳಿಸುವಂತೆ ಮಕ್ಕಳ ಪಾಲಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.

ಕೊಡಗರಹಳ್ಳಿ ಕಂಬಿಬಾಣೆ ಸಂಪರ್ಕ ರಸ್ತೆಯ 1 ಖಾಸಗಿ ಶಾಲೆ ಸರ್ಕಾರಿ ಪ್ರಾಥಮಿಕ ಹಾಗೂ ಅನುದಾನಿತ ಪ್ರೌಢಶಾಲೆಯು ಕಾರ್ಯಚರಿಸುತ್ತಿದೆ. ಈ ಶಾಲೆಗಳಿಗೆ ವ್ಯಾಸಂಗಕ್ಕೆ ತೆರಳುವ ಮಕ್ಕಳು ನಿತ್ಯ ನೂರಾರು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ನಡೆದುಕೊಂಡು ಶಾಲೆಗಳಿಗೆ ತೆರಳುತ್ತಾರೆ. ಅಲ್ಲದೆ ಚಿಕ್ಲಿಹೊಳೆ ಸಂಪರ್ಕ ರಸ್ತೆಯು ಇದಾಗಿದ್ದು, ಈ ಭಾಗದ ನಿವಾಸಿಗಳು ವಾಹನಗಳಲ್ಲಿ ಸಂಚರಿಸುವ ಸಂದರ್ಭ ಒಣಗಿ ನಿಂತಿರುವ ಮಕ್ಕಳ ಮತ್ತು ವಾಹನ ಸವಾರರ ಮೇಲೆ ಉರುಳಿ ಬೀಳುವ ಸಾಧ್ಯತೆ ಅಧಿಕವಾಗಿದೆ. ಭಾರೀ ಅನಾಹುತ ಹಾಗೂ ಪ್ರಾಣಹಾನಿ ಸಂಭವಿಸುವ ಮುನ್ನ ಸಂಬಂಧಿಸಿದ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯವರು ಇತ್ತ ಗಮನಹರಿಸಿ ಮರ ತೆರವಿಗೆ ಕ್ರಮ ಕೈಗೊಳ್ಳುವಂತೆ ಮಕ್ಕಳ ಪಾಲಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net