ಗ್ರಾಮಾಧಿಕಾರಿ ಕಚೇರಿ ಸ್ಥಳಾಂತರಿಸಲು ಒತ್ತಾಯ

Published on

ಕಾಸರಗೋಡು: ಕೂಡ್ಲು ಗ್ರಾಮಾಧಿಕಾರಿ ಕಚೇರಿಗಾಗಿ ಉಳಿಯತಡ್ಕ ನ್ಯಾಷನಲ್ ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಕಟ್ಟಡದ ಉದ್ಘಾಟನೆ 2023 ಮಾ.30 ರಂದು ನಡೆಸಲಾಗಿದ್ದರೂ, ಇದುವರೆಗೆ ಕಾರ್ಯಾರಂಭಿಸದಿರುವುದು ಖಂಡನೀಯ. ಇಂದಿಗೂ ಎರಿಯಾಲಿನ ಸಂಚಾರ ಯೋಗ್ಯವಲ್ಲದ ಸ್ಥಳದಲ್ಲಿ ಕಾರ್ಯಾಚರಿಸುತ್ತಿರುವ ಕಚೇರಿಯನ್ನು ತಕ್ಷಣ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ರಾಮದಾಸ್ ನಗರ ಲೋಕಲ್ ಸಮ್ಮೇಳನದಲ್ಲಿ ಒತ್ತಾಯಿಸಲಾಗಿದೆ.

ಪಾರಕಟ್ಟೆ ಬುದ್ಧದೇವ್ ಭಟ್ಟಾಚಾರ್ಯ ನಗರದಲ್ಲಿ ಜರುಗಿದ ಸಮ್ಮೇಳನವನ್ನು ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಮಂಡಳಿ ಸದಸ್ಯ ಕೆ. ಆರ್.ಜಯಾನಂದ ಉದ್ಘಾಟಿಸಿದರು. ಎಂ.ಅಶೋಕ ರೈ, ಸಿ.ಶೋಭಲತಾ, ಜಲೀಲ್ ಅವರನ್ನು ಒಳಗೊಂಡ ಅಧ್ಯಕ್ಷೀಯ ಮಂಡಳಿ ಸಮ್ಮೇಳನ ನಡೆಸಿತು. ನೂತನ ಕಾರ್ಯದರ್ಶಿಯಾಗಿ ಕೆ.ಭುಜಂಗ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿ ಕೆ.ಭುಜಂಗ ಶೆಟ್ಟಿ ವರದಿ ಮಂಡಿಸಿದರು. ಶಾಸಕ ಸಿ.ಎಚ್.ಕುಞಂಬು, ಎಂ.ಸುಮತಿ, ಕೆ.ಎ.ಮೊಹಮದ್ ಹನೀಫ್, ಟಿ.ಕೆ.ರಾಜನ್, ಟಿ.ಎಂ.ಎ.ಕರೀಮ್, ಶಾಂತಕುಮಾರಿ, ಎಂ.ಕೆ.ರವೀಂದ್ರನ್, ಅನಿಲ್, ಎ.ರವೀಂದ್ರನ್, ಕೆ.ರವೀಂದ್ರನ್, ಪಿ.ಶಿವಪ್ರಸಾದ್, ಪಿ.ವಿ.ಕುಞಂಬು, ಎಸ್.ಸುನೀಲ್, ಕೆ.ವಿ.ರಮೇಶನ್, ಅಜಿತ್ ಕುಮಾರ್, ರಾಬರ್ಟ್ ಕ್ರಾಸ್ತಾ, ನಂದನ್, ಲೀನ ಉಪಸ್ಥಿತರಿದ್ದರು. ಕೆ.ಎಂ.ಮೊಹಮದ್ ಸ್ವಾಗತಿಸಿದರು. ಕೆ.ಪಿ.ವಿಜಯಚಂದ್ರನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net