

ಚಿಕ್ಕಮಗಳೂರು: ಯಾದಗಿರಿ ಠಾಣೆಯ ಪರಿಶಿಷ್ಟ ಜನಾಂಗದ ಪಿಎಸ್‌ಐ ಪರಶುರಾಮ್ ಅನುಮಾನಸ್ಪದ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಜಿಲ್ಲಾ ಬಿಜೆಪಿ ಎಸ್‌ಸಿ. ಮೋರ್ಚಾದ ಮುಖಂಡರು ಸೋಮವಾರ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಹೇಮಂತ್‌ಕುಮಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಮುಖಂಡರುಗಳು ದಲಿತ ಸಬ್‌ಇನ್ಸ್ಪೆಕ್ಟರ್ ಸಾವಿನ ತನಿಖೆಯನ್ನು ಸಮಗ್ರವಾಗಿ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಯಾದಗಿರಿ ಠಾಣೆಯಲ್ಲಿ ಏಳು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡ ದಲಿತ ಸಬ್‌ಇನ್ಸ್ಪೆಕ್ಟರ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್, ಕಾಂಗ್ರೆಸ್ ಶಾಸಕ ಚೆನ್ನರೆಡ್ಡಿ ಹಾಗೂ ಮಗನ ಕೈವಾಡವಿರುವ ಕಾರಣ ಪರಶುರಾಮನ ಪತ್ನಿ ಎನ್.ವಿ.ಶ್ವೇತ ಪ್ರಕರಣ ದಾಖಲಿಸಿದ್ದಾರೆ ಎಂದರು.
ಪತ್ನಿಯ ದೂರಿದನ್ವಯ ಪಿಎಸ್‌ಐ ಸಾವಿಗೆ ಶಾಸಕÀ ಹಾಗೂ ಪುತ್ರರೇ ಕಾರಣರಾಗಿದ್ದಾರೆ. ಶಾಸಕ ಹಾಗೂ ಪುತ್ರ ಪಿಎಸ್‌ಐಗೆ ೩೦ ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಇಷ್ಟಾದರೂ ಶಾಸಕರು ಪ್ರಕರಣದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಈ ವರ್ಗಾವಣೆ ಸಮಸ್ಯೆಯಿಂದ ನೊಂದ ಪಿಎಸ್‌ಐ ಮಾನಸಿಕ ಒತ್ತಡದಿಂದ ಮೃತಪಟ್ಟಿರಬಹುದು. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯದರ್ಶಿ ಸೀತಾರಾಮ ಭರಣ್ಯ, ನಗರಸಭೆ ಸದಸ್ಯ ಮಣಿಕಂಠ, ನಗರ ಮಂಡಲ ಉಪಾಧ್ಯಕ್ಷ ರೇವನಾಥ್, ಗ್ರಾಮಾಂತರ ಎಸ್‌ಸಿ ಮೋರ್ಚಾ ಅಧ್ಯಕ್ಷ ಜಗದೀಶ್, ಪ್ರದೀಪ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ಶೇಖರ್, ಮುಖಂಡರಾದ ರಾಘವೇಲು, ವೈ.ಜಿ.ಸುರೇಶ್, ನಾಗಣ್ಣ, ಚಂದ್ರಪ್ಪ, ನಂಜುAಡಪ್ಪ, ರಾಜಕುಮಾರ, ರವಿ, ಗ್ರಾಮ ಪಂಚಾಯಿತಿ ಸದಸ್ಯರಾದ ರಘು ಸಿಂದಿಗೆರೆ, ಯೋಗೇಶ್ ಬೀಕನಹಳ್ಳಿ ಉಪಸ್ಥಿತರಿದ್ದರು.