ನಿಖಿಲ್ ಪ್ರಕರಣ ಸಿಬಿಐಗೆ ವಹಿಸಲು ಒತ್ತಾಯ

h8-perur
Published on

ಹುಬ್ಬಳ್ಳಿ: ನಿಖಿಲ್ ಕುಂದಗೋಳ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಒತ್ತಾಯಿಸಿ ಕರ್ನಾಟಕ ಮಾದಿಗ ದಂಡೋರ ಪದಾಧಿಕಾರಿಗಳು, ನಗರದಲ್ಲಿ ಬುಧವಾರ ತಹಸೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ರವಾನಿಸಿದರು.

ಕೇಶ್ವಾಪೂರ ಠಾಣೆಯ ಪೊಲೀಸ್ ಅಧಿಕಾರಿಗಳ ಕಿರುಕುಳದಿಂದ ನಿಖಿಲ್ ಕುಂದಗೋಳ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ. ಅವರ ಕುಟುಂಬಕ್ಕೆ ಆಧಾರಸ್ಥಂಭ ಇಲ್ಲವಾಗಿದೆ. ಇದರಲ್ಲಿ ಪೊಲೀಸರ ಕರ್ತವ್ಯ ವಿಫಲವಾಗಿದೆ. ಕೂಡಲೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ನಿಖಿಲ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯ ಕಾರ್ಯದರ್ಶಿ ಗಂಗಾಧರ ಗಂಗಪ್ಪ ಪೆರೂರ, ಜಿಲ್ಲಾಧ್ಯಕ್ಷ ವೆಂಕಟೇಶ ಅನಂತಪೂರ, ಪ್ರಮುಖರಾದ ಮಾಲತೇಶ ಮೊರಬದ, ವಿಜಯ ಕರ್ರ, ಹನುಮಂತ ಯರಗುಂಟಿ, ಸೋಮಶೇಖರ ಸಾಕೀನ, ರಾಮಕೃಷ್ಣ ಅನಂತಪುರ, ಮಹೇಶ ಭಂಡಾರಿ, ಸಿದ್ದಪ್ಪ ಕತ್ರಿಮಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net