

ಲೋಕಾಪುರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಲಿಕಟ್ಟಿ ಬಿ.ಕೆ. ಗ್ರಾಮದ ಮನೆಗಳ ಉತಾರ ನೀಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪಟ್ಟಣ ಪಂಚಾಯಿತಿಗೆ ಬುಧವಾರ ಮುತ್ತಿಗೆ ಹಾಕಿದರು.
ಪಪಂನಲ್ಲಿ ಆರು ತಿಂಗಳಿಂದ ಮನೆಗಳಿಗೆ ಉತಾರ ನೀಡುತ್ತಿಲ್ಲ. ಇದರಿಂದ ಜನತೆಗೆ ಬ್ಯಾಂಕ್ ಸಾಲ, ಆಸ್ತಿ ಖರೀದಿ ಇನ್ನೀತರ ಕೆಲಸಕ್ಕೆ ತೊಂದರೆಯಾಗಿದೆ. ಈ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾಲಿಕಟ್ಟಿ ಗ್ರಾಮದ ಮುಖಂಡ ಪುಂಡಲೀಕ ಮಾದರ ಮಾತನಾಡಿ, ಸಾಲ- ಸೋಲ ಮಾಡಿ ಪಪಂಗೆ 20 ರಿಂದ 30 ಸಾವಿರ ತೆರಿಗೆ ತುಂಬಿದ್ದೇವೆ. ಮಕ್ಕಳ ಶಿಕ್ಷಣ, ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬ್ಯಾಂಕ್ ಸಾಲ ಪಡೆಯಲು ಉತಾರದ ಅವಶ್ಯಕವಿದ್ದು, ಆದ್ದರಿಂದ ಕೂಡಲೇ ಉತಾರ ನೀಡಬೇಕೆಂದು ಆಗ್ರಹಿಸಿದರು.
ಸದಾಶಿವ ಪಾಟೀಲ, ಮುಪ್ಪಣ್ಣ ತೆಗ್ಗಿ, ರಂಗಪ್ಪ ಹಡಪದ, ದ್ಯಾಮಪ್ಪ ಮಾದರ, ಪುಂಡಲೀಕ ತಳವಾರ, ಪುಂಡಲೀಕ ಮಾದರ, ಗೋಪಾಲಗೌಡ ಪಾಟೀಲ, ಹಣಮಂತ ಉಪ್ಪಾರ, ಮಾರುತಿ ಉಪ್ಪಾರ, ರಂಗಪ್ಪ ಮಾದರ, ರಿಯಾಜ್ ಮಕಾನದಾರ, ಶಫೀಕ್ ಬೇಪಾರಿ, ನಿಂಗಪ್ಪ ಬಡಿಗೇರ, ಪ್ರಕಾಶ ತಳವಾರ, ಆನಂದ ಮಳಲಿ, ಮಾಯಪ್ಪ ಮಾದರ, ಸರೋಜ ಹಗ್ಗದ, ಸುಜಾತ ಮಾದರ, ಶ್ರೀದೇವಿ ಉಪ್ಪಾರ, ರೇಣುಕಾ ಮಾದರ, ಜಾಲಿಕಟ್ಟಿ ಬಿ.ಕೆ. ಗ್ರಾಮಸ್ಥರು ಇದ್ದರು.
ಜಾಲಿಕಟ್ಟಿ ಬಿ.ಕೆ. ಗ್ರಾಮದ ಸರ್ವೇ ನಂ. 125ರ ಮೇಲೆ ಹೈಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಹೀಗಾಗಿ ಉತಾರ ನೀಡಲು ವಿಳಂಬವಾಗುತ್ತಿದೆ. ಜನವರಿ 19 ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ಮುಗಿದ ಬಳಿಕ ವಕೀಲರು, ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಉತಾರ ನೀಡಲು ಕ್ರಮ ಕೈಗೊಳ್ಳಲಾಗುವುದು.
ಜ್ಯೋತಿ ಉಪ್ಪಾರ, ಪಪಂ ಮುಖ್ಯಾಧಿಕಾರಿ ಲೋಕಾಪುರಟ್ಟಣ ಪಂಚಾಯತ ಮುಖ್ಯಾಕಾರಿಗಳು, ಲೋಕಾಪುರ.