ರೈತರಿಗೆ ಪರಿಹಾರ ನೀಡಲು ಒತ್ತಾಯ

4MDG3 MANAVI
Published on

ಮುಂಡರಗಿ: ಖಾಸಗಿ ಕಂಪನಿಯೊಂದರಿಂದ ಸೂರ್ಯಕಾಂತಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದ ಬೆಳೆಯೆಲ್ಲವೂ ನಾಶವಾಗಿದ್ದು, ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ತಾಲೂಕಿನ ಹಾರೋಗೇರಿ ಗ್ರಾಮದ ರೈತರು ಮಂಗಳವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು. ಖಾಸಗಿ ಕಂಪನಿಯಿಂದ ಸೂರ್ಯಕಾಂತಿ ಬಿತ್ತನೆ ಬೀಜ ಖರೀದಿಸಿದ ಹಾರೋಗೇರಿ ಭಾಗದ ಜಮೀನುಗಳಲ್ಲಿ ನೂರಾರು ರೈತರು ಬಿತ್ತನೆ ಮಾಡಿದ್ದರು. ಆದರೆ, ಕಳಪೆ ಬೀಜದಿಂದಾಗಿ ಬೆಳೆಯಲ್ಲ ಸಂಪೂರ್ಣ ಹಾನಿಗೀಡಾಗಿದೆ. ಮೊದಲೇ ಬರಗಾಲವಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಈ ಬಗ್ಗೆ ತಾವು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಗ್ರೇಡ್-2 ತಹಸೀಲ್ದಾರ್ ಕೆ. ರಾಧಾ ಮನವಿ ಸ್ವೀಕರಿಸಿದರು. ಬಸವರಾಜ ಕಣವಿ, ಬಸೀರಸಾಬ್ ವಡ್ಡಟ್ಟಿ, ರವೀಂದ್ರ ಜವಿ, ಬಸವರಾಜ ಹಾರೋಗೇರಿ, ನಾಗನಗೌಡ ಪಾಟೀಲ, ವಾಸಪ್ಪ ಚೋಳಮ್ಮನವರ, ಅಶೋಕ ಬನ್ನಿಕೊಪ್ಪ, ಸೋಮಪ್ಪ ಬಜಮ್ಮನವರ, ಕುಬೇರ ವೀರಾಪೂರ, ಸುರೇಶ ಕವಲೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net