

ರಾಯಚೂರು ಪರಿಶಿಷ್ಟ ಪಂಗಡದ ತಳವಾರ ಮತ್ತು ಪರಿವಾರ ಹೆಸರಿನ ಮೇಲೆ ಹಿಂದುಳಿದ ವರ್ಗದಲ್ಲಿ ಬರುವ ಅನೇಕರು ಎಸ್‌ಟಿ
ಪ್ರಮಾಣ ಪತ್ರ ಪಡೆದು ಅರ್ಹ -Àಲಾನುಭವಿಗಳಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿದ್ದಾರೆ ಈ ಕೂಡಲೇ ಎಸ್‌ಟಿ ನಕಲಿ ಪ್ರಮಾಣ ಪತ್ರ ತಡೆಗೆ ಆಯೋಗ ರಚನೆ ಮಾಡಬೇಕೆಂದುಚ ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮಿಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್ ರಘುವೀರ ನಾಯಕ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ವರ್ಗದಲ್ಲಿ ಬರುವವರು ತಳವಾರ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದರೆ ಅವರಿಗೆ ಎಸ್‌ಟಿ ಪ್ರಮಾಣ ಪತ್ರವನ್ನು ವಿತರಣೆ ಮಾಡುತ್ತಿದ್ದಾರೆ, ಇದರಿಂದ ಅರ್ಹ -Àಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ, ನಾಯ್ಕಡ್, ನಾಯಕ ಜಾತಿಯ ಪರ್ಯಾಯ ಪದ ಜಾತಿಗಳಾದ ತಳವಾರ ಮತ್ತು ಪರಿವಾರ ಜಾತಿಗಳಿಗೆ ಮಾತ್ರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕೆಂದು
ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ೨೦೨೫ರ
-ೆ.೭ರಂದು ಸುತ್ತೋಲೆ ಹೊರಡಿಸಿ ಸ್ಪಷ್ಟಪಡಿಸಿದ್ದಾರೆ ಎಂದರು.
ಪ್ರವರ್ಗ ೧ರ ಕ್ರಮ ಸಂಖ್ಯೆ ೬ರಲ್ಲಿನ ಪರಿವಾರ ಜಾತಿ ರಾಜ್ಯದ ಎಸ್‌ಟಿ ಪಟ್ಟಿಯಲ್ಲಿಲ್ಲ, ಇನ್ನುಳಿದ ಕಬ್ಬಲಿಗ, ಗಂಗಾಮತಸ್ಥ, ಕೋಳಿ, ಸುಣಗಾರ, ಮೊಗವೀರ ಇತರೆ ಸಮುದಾಯಗಲ್ಲಿಯೂ ತಳವಾರ ಎನ್ನುವ ಜಾತಿಯವರು ಮತ್ತು ವೃತ್ತಿಯಿಂದ ತಳವಾರ ಎಂದು ಕರೆಯಲ್ಪಡುವ ಜನರಿದ್ದಾರೆ, ಇವರು ಎಸ್‌ಟಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸೌಲಭ್ಯ ಗಳನ್ನು ಪಡೆಯುತ್ತಿದ್ದಾರೆ, ಇದರಿಂದ ಅರ್ಹ -Àಲಾನುಭವಿಗಳು ಸೌಲ
ಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡವರ ಪ್ರಮಾಣ ಪತ್ರ ರದ್ದುಪಡಿಸಬೇಕು, ನಕಲಿ ಪ್ರಮಾಣ ಪತ್ರ ಕಡಿವಾಣಕ್ಕೆ ಆಯೋಗ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ನಾಯಕ, ರಾಮು ನಾಯಕ, ನರೇಂದ್ರ ನಾಯಕ, ರಮೇಶ ನಾಯಕ, ಇದ್ದರು.