

ರಾಯಚೂರು ಜಿಲ್ಲೆಯಲ್ಲಿ ಉಕ್ಕು ಮತ್ತು ವಿದ್ಯುತ್ ಉತ್ಪಾದನೆಗೆ ಸುರಾನ ಇಂಡಸ್ಟಿçÃಜ್‌ಗೆ ನೀಡಿದ್ದ ಕೈಗಾರಿಕೆ ಭೂಮಿಯನ್ನು ಮಾರಾಟಮಾಡಿ ವಂಚನೆ ಮಾಡಿದೆ ಎಂದು ಆರೋಪಿಸಿ ಕಂಪನಿ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಾಲಿಟ್ ಬ್ಯುರೋ ಸದಸ್ಯ ಆರ್. ಮಾನಸಯ್ಯ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಐಎಡಿಬಿಯಿಂದ ಮಂಜೂರಿಯಾದ ೧೩೧.೫೫ ಎಕರೆ ಭೂಮಿಯನ್ನು ಆನೇಕ ವಿನಾಯ್ತಿ ನೀಡಿ ಕಾರ್ಖಾನೆ ಸ್ಥಾಪಿಸಲು ಉದ್ದೇಶದಿಂದ ನೀಡಲಾಗಿತ್ತು. ಆದರೆ ಸುರಾನಾ ಇಂಡಸ್ಟೀಜ್ ಯಾವ ಉದ್ದೇಶಕ್ಕಾಗಿ ಭೂಮಿ ಪಡೆದಿತ್ತು ಅದನ್ನು ಬಳಸದೇ ರೋಗಗ್ರಸ್ಥ ಕೈಗಾರಿಕೆಯಾಗಿ ಪ್ರಮಾಣ ಪತ್ರ ಪಡೆಯಲು ಈ ಹಿಂದೆ ಜಿಲ್ಲಾಽಕಾರಿಯಾಗಿದ್ದ ನಾಗರಾಜ ಅವಽಯಲ್ಲಿ ಅರ್ಜಿ ಸಲ್ಲಿಸಿತ್ತು.
ಭೂಮಿ, ನೀರು, ಅನೇಕ ವಿನಾಯ್ತಿ ಪಡೆದರೂ ರೋಗಗ್ರಸ್ಥ ಎಂದು ಘೋಷಿಸಿಲು ಜಿಲ್ಲಾಽಕಾರಿಗಳು ನಿರ್ಧರಿಸಿದ್ದರು. ಆದರೀಗ ಕೈಗಾರಿಕೆ ಸಂಪೂರ್ಣ ಮುಚ್ಚಿದ್ದಲ್ಲದೇ ಕೈಗಾರಿಕೆಗೆ ನೀಡಲಾಗಿದ್ದ ಭೂಮಿಯನ್ನೇ ಅಡವಿಟ್ಟು ಮಾರಾಟಮಾಡಲಾಗಿದೆ. ಕೋಟ್ಯಾಂತರ ಮೌಲ್ಯದ ಆಸ್ತಿ ಮಾರಾಟವಾದರೂ ಜಿಲ್ಲೆಯ ಯಾವೊಬ್ಬ ಜನಪ್ರತಿನಿಽಯೂ ಮಾತನಾಡುತ್ತಿಲ್ಲ. ಕೈಗಾರಿಕೆ ಮುಚ್ಚುವಮುನ್ನ ಸಾರ್ವಜನಿಕ ಸಭೆ ನಡೆಸಿ, ಇಲ್ಲಾ ಏಕಗವಾಕ್ಷಿ ಸಭೆಯಲ್ಲಿಯಾದರೂ ಚರ್ಚಿಸಿ ನಿರ್ಧರಿಸಬೆ ಯಾವುದೇ ಪ್ರಕ್ರಿಯೆ ನಡೆಸದೇ ವಂಚಿಸಲಾಗಿದೆ ಎಂದು ಆರೋಪಿಸಿದರು.
ಸುರಾನಾ ಕಂಪನಿ ಚನೈಯಲ್ಲಿಯೇ ಸಾರ್ವಜನಿಕ ಪ್ರಕಟಣೆ ನೀಡಿ ಆಸ್ತಿಯನ್ನು ಮಾರಾಟ ಮಾಡಿದೆ. ೧೨ ಬ್ಯಾಂಕ್‌ಗಳಿAದ ಪಡೆದಿದ್ದ ಸಾಲ ಮರುಪಾವತಿ ಮಾಡದೇ ವಂಚಿಸಿರುವದರಿAದ ಸಿಬಿಐ ತನಿಖೆ ನಡೆದಿದೆ. ಕೈಗಾರಿಕೆ ಹೆಸರಿನಲ್ಲಲಿ ೧,೩೦೧ ಕೋಟಿ ರೂ ಸಾಲ ಪಡೆದು ಕೈಗಾರಿಕೆ ಮುಚ್ಚಲಾಗಿದೆ.ಭೂ ಸುಧಾರಣಾ ಕಾಯ್ದೆಯಂತೆ ಯಾವ ಉದ್ದೇಶಕ್ಕೆ ಸ್ವಾಽÃನಪಡಿಸಿಕೊಂಡು ಭೂಮಿಯನ್ನು ಅನ್ಯವಾಗಿ ಬಳಸಬಾರದು ಎಂಬ ನಿಯಮವನ್ನು ಸಹ ಪಾಲಿಸಿಲ್ಲ. ಈ ಕುರಿತು ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಏಕಗವಾಕ್ಷಿ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಽಕಾರಿಗಳಿಗೆ ದೂರು ನೀಡಲಾಗಿದೆ. ಯಾವುದೇ ಸ್ಪಂದನೆ ದೊರೆಯದೇ ಇದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿ.ಅಮರೇಶ, ಗಂಗಾಧರ, ಶೇಖ್ ಹುಸೇನ್ ಇದ್ದರು.
--------