ವಿಜಯಪುರ ಜಿಲ್ಲೆಗೆ ಇಂಜಿನಿಯರಿಂಗ್​ ಕಾಲೇಜ್​ ಸ್ಥಾಪನೆಗೆ ಒತ್ತಾಯ

Forced to establish an engineering college in Vijayapur district
ವಿಜಯಪುರ ಜಿಲ್ಲೆಗೆ ಸರ್ಕಾರಿ ಇಂಜಿನಿಯರಿಂಗ್​ ಕಾಲೇಜು ೂಷಣೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು. ಜಗದೇವ ಸೂರ್ಯವಂಶಿ, ಲಿಂಗರಾಜ ಬಿದರಕುಂದಿ, ಸಂಕೇತ ಪಟ್ಟಣದ ಮತ್ತಿತರರಿದ್ದಾರೆ.
Published on

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕಿಯ ಮಹಾವಿದ್ಯಾಲಯ ಸ್ಥಾಪನೆಗೆ ಅನುದಾನ ಮೀಸಲಿಡುವುದು, ಇಂಜಿನಿಯರಿಂಗ್​ ಕಾಲೇಜು ಸ್ಥಾಪನೆ ಬಗ್ಗೆ ಮುಂಬರುವ ಆಯವ್ಯಯದಲ್ಲಿ ೂಷಣೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಸೋಮವಾರ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಜಗದೇವ ಸೂರ್ಯವಂಶಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಬಡ ಪ್ರತಿಭಾವಂತ ಮಕ್ಕಳಿಗಾಗಿ ಸರ್ಕಾರಿ ವೈದ್ಯಕಿಯ ಕಾಲೇಜು ಹಾಗೂ ಇಂಜಿನಿಯರಿಂಗ್​ ಕಾಲೇಜು ಆರಂಭಿಸಬೇಕೆಂದು ದಶಕಗಳ ಬೇಡಿಕೆಯಿದೆ. ಈ ಸಲದ ಆಯವ್ಯಯದಲ್ಲಾದರೂ ೂಷಣೆಯಾಗಿ ಅನುಷ್ಠಾನಗೊಳ್ಳಲಿ ಎಂದು ಆಗ್ರಹಿಸಿದರು.

ತಾಲೂಕು ಕೇಂದ್ರವಾದ ಕೆ.ಆರ್​. ಪೇಟೆಯಲ್ಲಿ ಸರ್ಕಾರಿ ಇಂಜಿನಿಯರಿಂಗ್​ ಕಾಲೇಜು ದಶಕದ ಹಿಂದೆಯೇ ಆರಂಭವಾಗಿದೆ. ತಾಲೂಕು ಕೇಂದ್ರದಲ್ಲಿ ಸರ್ಕಾರಿ ಇಂಜಿನಿಯರಿಂಗ್​ ಕಾಲೇಜು ಆಗುವುದಾದರೆ, ನಮ್ಮ ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ? ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲವೇ? ಅಭಿವೃದ್ಧಿ ವಿಷಯದಲ್ಲಿ ದಕ್ಷಿಣ ಕರ್ನಾಟಕದವರಷ್ಟು ಕಾಳಜಿ, ಒಗ್ಗಟ್ಟು ಉತ್ತರ ಕರ್ನಾಟಕ ಭಾಗದ ನಮ್ಮವರಲ್ಲಿ ಏಕಿಲ್ಲ? ಎಂದು ಪ್ರಶ್ನಿಸಿದರು.

ಈ ಬಾರಿಯ ಬಜೆಟ್​ನಲ್ಲಿಯೇ ಸರ್ಕಾರಿ ವೈದ್ಯಕಿಯ ಕಾಲೇಜು ಹಾಗೂ ಇಂಜಿನಿಯರಿಂಗ್​ ಕಾಲೇಜು ಮಂಜೂರು ಹಾಗೂ ೂಷಣೆ ಆಗಬೇಕು ಎಂದು ಮನವಿ ಸಲ್ಲಿಸಿದರು.

ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿದರಕುಂದಿ, ಕಾರ್ಯಾಧ್ಯಕ್ಷ ಸಂಕೇತ ಪಟ್ಟಣದ, ಬಾಬಾಸಾಹೇಬ ಹತ್ತರಿಕಿಹಾಳ, ಬಾಳಪ್ಪ ಉಪ್ಪಿನ, ವೆಂಕಟೇಶ ಮರಡಿನಮನಿ, ಹುಸೇನಸಾಬ ಮುಲ್ಲಾ, ರಮೇಶ ಮುಂಡೆವಾಡಿ, ಸುಶೀಲಾ ಮಿನಜಿಗಿ, ನೀಲಾ ಕಾಳೆ, ಶಿವು ಕುಂಬಾರ, ಭಾಗ್ಯಾ ಗುಡದಿನ್ನಿ, ಜ್ಯೋತಿ ಮಿನಜಿಗಿ, ಪರಮಾನಂದ ಸಾರವಾಡ, ಮಲ್ಲಿಕಾರ್ಜುನ ಬಿರಾದಾರ, ಈಶ್ವರ ಪಡನ್ನಗವರ, ನಾಗರಾಜ ಭೂತನಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net