ಕಾಲುವೆ ಕೊನೆಭಾಗಕ್ಕೆ ನೀರು ಹರಿಸಲು ಒತ್ತಾಯಿಸಿ ಸಂಚಾರ ತಡೆ

TLBC MILE 104 FARMERS ASSOCIATION PRESS MEET (1)
Published on

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಕೊನೆ ಭಾಗದ ರಯತರಿಗೆ ಸಮರ್ಪಕ ನೀರುವ ಹರಿಸುವಂತೆ ಒತ್ತಾಯಿಸಿ ನಗರದ ಹೊರವಲಯದ ಸಾಥ್‌ಮೈಲ್ ಕ್ರಾಸ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಅ.16ರಿಂದ ಅನಿರ್ದಿಷ್ಟ ಸಂಚಾರ ತಡೆ ನಡೆಸಲಾಗುವುದು ಎಂದು ಟಿಎಲ್‌ಬಿಸಿ ಕೆಳಭಾಗದ ರೈತ ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕಾಲುವೆಗೆ ನೀರು ಹರಿಸಿ ಮೂರು ತಿಂಗಳಾದರೂ ಕೊನೆ ಭಾಗಕ್ಕೆ ನೂರು ಕ್ಯೂಸೆಕ್ ನೀರು ಸಹ ತಲುಪಿಲ್ಲ. ಕಾಲುವೆ ಕೊನೆಭಾಗದ ರೈತರಿಗೆ ನೀರು ಕೊಡುವಲ್ಲಿ ಸರ್ಕಾರ ವಿಲವಾಗಿದೆ ಎಂದರು.
ತುಂಗಭದ್ರಾ ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ನೀರು ಹರಿಸಲು ನೀರಾವರಿ ನಿಗಮದ ಅಕಾರಿಗಳು ವಿಫಲವಾಗಿದ್ದಾರೆ. 104 ಮೈಲ್ ನಂತರ ಸರಿ ಸುಮಾರು 55 ಸಾವಿರ ಎಕರೆ ಪ್ರದೇಶದಲ್ಲಿ ಹತ್ತಿ,, ಮೆಣಿಸಿನಕಾಯಿ, ಭತ್ತ ಸೇರಿದ ಬೆಳೆಗಳು ನೀರಿಲ್ಲದೆ ಒಣಗುವಂತಾಗಿದೆ.
ಕಾಲುವೆ ಮೇಲ್ಭಾಗದಲ್ಲಿ ಹೆಚ್ಚುವರಿ ನೀರು ಪಡೆಯುತ್ತಿರುವುದರಿಂದ ಕೆಳಭಾಗದಲ್ಲಿ ನಿಗದಿತ ನೀರು ಹರಿಯದಂತಾಗಿದೆ. ಮೇಲ್ಭಾಗದಲ್ಲಿ ಅಕ್ರಮ ನೀರಾವರಿ ಪ್ರದೇಶಕ್ಕೆ ನೀರು ಹರಿಸುತ್ತಿರುವುದರಿಂದ ಕೆಳಭಾಗಕ್ಕೆ ನಿಗದಿತ ಗೇಜ್ ನಿರ್ವಹಣೆ ಮಾಡಲಾಗದಂತಾಗಿದೆ.
ಪ್ರತಿ ಎಕರೆ ಮೆಣಿಸಿನಕಾಯಿ ಬೆಳೆಗೆ ರೈತರು ಎಕರೆ 50 ಸಾವಿರ ರೂ.ದಿಂದ ಲಕ್ಷ ರೂ.ವರೆಗೆ ಹಣ ವೆಚ್ಚ ಮಾಡಿದ್ದಾರೆ. ಬೆಳೆ ಒಣಗುವ ಸ್ಥಿತಿಯಲ್ಲಿದ್ದು, ಕೂಡಲೇ ಜಿಲ್ಲೆಯ ಎಲ್ಲ ಶಾಸಕರುಗಳು, ಉಸ್ತುವಾರಿ ಸಚಿವರು ಕೊನೆಭಾಗಕ್ಕೆ ನೀರು ಒದಗಿಸಲು ಒತ್ತಡ ಹೇರಬೇಕಾಗಿದೆ.
ಪ್ರತಿಬಾರಿಯೂ ಹೋರಾಟದ ಮೂಲಕವೇ ನೀರು ಪಡೆಯುವ ಪರಸ್ಥಿತಿ ನಿರ್ಮಾಣವಾಗಿದೆ. ಕೊನೆಭಾಗಕ್ಕೆ ನೀರು ಒದಗಿಸಲು ಇಲಾಖೆ ಅಕಾರಿಗಳು ಗಮನಹರಿಸುತ್ತಿಲ್ಲ. ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದರೂ ನೀರು ಬರುತ್ತಿಲ್ಲ. ಜಿಲ್ಲಾಕಾರಿ,ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ.
ಅಚ್ಚುಕಟ್ಟುಪ್ರದೇಶದ ರೈತರ ಭಾರಿ ಆರ್ಥಿಕ ನಷ್ಟವಾಗುವ ಆತಂಕ ಎದುರಾಗಿದೆ. 16 ರೊಳಗೆ ಗೇಜ್ ಕಾಯ್ದುಕೊಳ್ಳದೆ ಹೋದರೆ, ಅನಿರ್ದಿಷ್ಟ ಧರಣಿ ಅನಿವಾರ್ಯವಾಗುತ್ತದೆ ಎಂದು ಮಹಾಂತೇಶ ಪಾಟೀಲ್ ಅತ್ತನೂರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಮಿತಿ ಕಾರ್ಯದರ್ಶಿ ಸಿದ್ಧನಗೌಡ ಪಾಟೀಲ್, ಪದಾಕಾರಿಗಳಾದ ಶರಣಪ್ಪ ಕಲ್ಮಲಾ, ಕೆ.ಬಸವರಾಜ, ಸತ್ಯನಾರಾಯಣ ಮರ್ಚೆಟಹಾಳ, ವೆಂಕಟೇಶ ರೆಡ್ಡಿ, ಈರಪ್ಪಗೌಡ, ವಿಶ್ವೇಶ್ವರಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net