

ಚಿಕ್ಕಮಗಳೂರು: ತಾಲೂಕಿನ ವಸ್ತಾರೆ ಹೋಬಳಿ ಬಾಚಿಗನಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಜಮೀನಿನ ಸ್ಮಶಾನ ಜಾಗದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ಹರ್ಷವರ್ಧನ್ ಅವರಿಗೆ ಬಾಚಿಗನಹಳ್ಳಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಬಾಚಿಗನಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಸರ್ವೆ ನಂಬರ್ ೪೫ ರಲ್ಲಿ ೩೮ ಗುಂಟೆ ಜಾಗವನ್ನು ಸುಮಾರು ೭೫ ವರ್ಷಗಳ ಹಿಂದೆ ಸ್ಮಶಾನಕ್ಕೆ ಸರ್ಕಾರ ಮಂಜೂರು ಮಾಡಿತ್ತು. ಈ ಜಾಗಕ್ಕೆ ಗ್ರಾಪಂನಿAದ ಬೇಲಿ ನಿರ್ಮಿಸಲಾಗಿತ್ತು. ಆದರೆ ಈಗ ಸ್ಮಶಾನ ಜಾಗದಲ್ಲಿ ಲಕ್ಷö್ಮಣ್‌ಗೌಡ ಎಂಬುವರ ಕುಟುಂಬದವರು ಜೆಸಿಬಿ ಮೂಲಕ ಸಮಾಧಿಗಳ ಮೇಲೆ ಮಣ್ಣುಹಾಕಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಇವರಿಗೆ ಬೇರೆ ಕಡೆ ರಸ್ತೆ ನಿರ್ಮಾಣ ಮಾಡಲು ಜಾಗವಿದ್ದರೂ ಇದೇ ಜಾಗದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಈ ಸಂಬAಧ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿದ್ದು, ಗ್ರಾಮಸ್ಥರಿಗೆ ಹಾಗೂ ಗ್ರಾಮ ಪಂಚಾಯಿತಿಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ಈ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಬಾರದು ಎಂದು ಹೇಳಿದಾಗ ಉಡಾಫೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದರು.
ಸ್ಮಶಾನ ಜಾಗಕ್ಕೆ ಸಂಬAಧಿಸಿದAತೆ ಯಾವುದೇ ಅಹಿತಕರ ಘಟನೆ ನಡೆಯಬಾರದು. ಕೂಡಲೇ ಸಂಬAಧಪಟ್ಟ ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಸ್ಮಶಾನ ಜಾಗದಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾರ್ಯವನ್ನು ತಡೆಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಮುಖಂಡ ಮರ್ಲೆ ಅಣ್ಣಯ್ಯ, ವಸಂತ ಕುಮಾರ್, ರುದ್ರಯ್ಯ, ಗ್ರಾಮಸ್ಥರಾದ ಗೋÃಪಾಲ್‌ಕೃಷ್ಣ, ಕೋಮಲ್, ಸುರೇಶ್, ಲಕ್ಷö್ಮಯ್ಯ, ಉದಯ, ಕೃಷ್ಣಮೂರ್ತಿ, ರಾಜೇಶ್, ತಿಮ್ಮಯ್ಯ, ಚಂದ್ರಯ್ಯ, ದಿನೇಶ, ಮೋಹನ, ಮಹೇಶ್, ರಂಗಪ್ಪ, ಮಂಜುನಾಥ, ಸುನೀಲ್, ನಾಗರಾಜು, ರವಿ ಮತ್ತಿತರರಿದ್ದರು.