ಒತ್ತುವರಿ ತೆರವುಗೊಳಿಸಲು ಒತ್ತಾಯ

m
Published on

ಮೊಳಕಾಲ್ಮೂರು: ಪಪಂ ನಿಯಮ ಮೀರಿ ಕೆಲವರು 3-4 ಅಂತಸ್ಥಿನ ಮಳಿಗೆ ಕಟ್ಟಿದ್ದಾರೆ. ಇನ್ನೂ ಕೆಲವರು ಹಣ ಮತ್ತು ರಾಜಕೀಯ ಪ್ರಭಾವ ಬಳಸಿ ಪಪಂ ಆಸ್ತಿಯನ್ನೇ ಒತ್ತುವರಿ ಮಾಡಿ ದೊಡ್ಡ ಕಟ್ಟಡ ನಿರ್ಮಿಸಿದ್ದಾರೆ. ಈ ಕುರಿತು ದಾಖಲಾತಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ದಲಿತ, ರೈತ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದರು.

ಮೊಳಕಾಲ್ಮೂರು ತಹಸೀಲ್ದಾರ್ ಎಂ.ವಿ.ರೂಪಾ ಅವರಿಗೆ ಸೋಮವಾರ ಮನವಿ ಸಲ್ಲಿಸಿದ ಮುಖಂಡರು, ಯಾವುದೇ ಒತ್ತಡಕ್ಕೆ ಮಣಿಯದೆ ನ್ಯಾಯಪರ ನಿಲ್ಲಬೇಕು. ಅನ್ಯಾಯಕ್ಕೆ ತುತ್ತಾಗಿರುವ ದಲಿತರಿಗೆ ವಸತಿ ಸೌಲಭ್ಯ ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಎಂ.ವಿ.ರೂಪಾ ಮಾತನಾಡಿ, ಸಾರ್ವಜನಿಕ ಸೇವೆಯಲ್ಲಿ ಲೋಪ ಎಸಗುವುದನ್ನು ನನಗೆ ಸಹಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಗುತ್ತಿಗೆದಾರರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದೇನೆ ಎಂದರು.

ರಸ್ತೆ ಅಭಿವೃದ್ಧಿ ಜತೆಗೆ ಅಗತ್ಯ ಸೇವೆಗಳ ಲಭ್ಯತೆ ಇರಬೇಕು. ಕ್ರಿಯಾ ಯೋಜನೆ ಪಟ್ಟಿಯಂತೆ ಕೈಗೆತ್ತಿಕೊಂಡಿರುವ ಕಾಮಗಾರಿ ಕುರಿತು ಸೂಕ್ತ ತನಿಖೆ ನಡೆಸಲಾಗುವುದು. ಗುತ್ತಿಗೆದಾರನ ಬೇಜಾವಾಬ್ದಾರಿಯಿಂದ ಆಗಿರುವ ಲೋಪ ಸರಿಪಡಿಸಲು ಮೂರ‌್ನಾಲ್ಕು ದಿನದಲ್ಲಿ ಸಭೆ ಕರೆಯಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net