ಸಂಭಾವ್ಯ ಅವಘಡ ತಪ್ಪಿಸಲು ಒತ್ತಾಯ

MND MARA
Published on

ಮುಂಡಗೋಡ: ಪಟ್ಟಣದ ಹೊರವಲಯದಿಂದ ಪಾಳಾ ಕ್ರಾಸ್​ವರೆಗೆ ಹಾಗೂ ಯಲ್ಲಾಪುರ ರಸ್ತೆಯ ಟಿಬೆಟಿಯನ್​ಕ್ಯಾಂಪ್​ವರೆಗೆ ರಸ್ತೆಯ ಅಂಚಿನ ಹಳೆಯ ಮರಗಳಿದ್ದು ಯಾವ ಸಮಯದಲ್ಲಿ ಬೀಳುತ್ತವೆ ಎಂಬುದು ತಿಳಿಯದಾಗಿದೆ.

ಮುಂಡಗೋಡದಿಂದ ಶಿರಸಿಗೆ ತೆರಳುವ ರಾಜ್ಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಪಾಳಾಕ್ರಾಸ್​ವರೆಗೆ ಹಾಗೂ ಯಲ್ಲಾಪುರ ರಸ್ತೆಯ ಟಿಬೆಟಿಯನ್ ಕ್ಯಾಂಪ್ ರಸ್ತೆ ಪಕ್ಕದಲ್ಲಿ ನೂರಾರು ವರ್ಷಗಳ ಹಳೆಯ ಮರಗಳಿವೆ. ನಿರಂತರ ಮಳೆಗೆ ಆಗಾಗ ಮರಗಳು ಧರೆಗುರುಳುತ್ತಿವೆ.

ಅಪಾಯ ಸಂಭವಿಸುವ ಮೊದಲೇ ಅರಣ್ಯ ಇಲಾಖೆಯವರು ಬೀಳುವ ಹಂತದಲ್ಲಿರುವ ಹಾಗೂ ಒಣಗಿ ನಿಂತಿರುವ, ಬೇರುಗಳು ಸಡಿಲಗೊಂಡಿರುವ ಮರಗಳನ್ನು ಗುರುತಿಸಿ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net